ಉಳ್ಳಾಲ: ಟೋಯಿಂಗ್ ವಾಹನ ಢಿಕ್ಕಿ: ಪಾದಚಾರಿ ಮೃತ್ಯು
ಉಳ್ಳಾಲ: ಟೊಯಿಂಗ್ ವಾಹನ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಪಾದಚಾರಿ ವೃದ್ದರೋರ್ವರು ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಕಲ್ಲಾಪು ರಾ.ಹೆ.66 ರಲ್ಲಿ ಶುಕ್ರವಾರ ಸಂಭವಿಸಿದೆ.
ಉಳ್ಳಾಲ ಕಡೆಗೆ ತೆರಳುತ್ತಿದ್ದ ಟೋಯಿಂಗ್ ವಾಹನ ಅಪಘಾತ ಸಂಭವಿಸಿದೆ. ಮೃತ ವ್ಯಕ್ತಿ ಅಂದಾಜು 70ರ ಹರೆಯದವರಾಗಿದ್ದು, ಯಾವುದೇ ಗುರುತಿನ ಚೀಟಿಗಳು ಲಭ್ಯವಾಗಿಲ್ಲ. ವಾರೀಸುದಾರರಿದ್ದಲ್ಲಿ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.




