December 4, 2024

ಮನೆ ಸಮೀಪದ ಕ್ವಾರಿ ಹೊಂಡಕ್ಕೆ ಬಿದ್ದು 6ನೇ ತರಗತಿ ವಿದ್ಯಾರ್ಥಿ ಮೃತ್ಯು

0

ಮುಕ್ಕಂ: ಮನೆ ಸಮೀಪದ ಕ್ವಾರಿ ಹೊಂಡಕ್ಕೆ ಬಿದ್ದು 6ನೇ ತರಗತಿ ವಿದ್ಯಾರ್ಥಿಯೊಬ್ಬ ದಾರುಣ ಅಂತ್ಯ ಕಂಡಿದ್ದಾನೆ. ಮುಕ್ಕಂ ಮನಸ್ಸೇರಿಯಲ್ಲಿ ಈ ಘಟನೆ ನಡೆದಿದೆ.

ನೆಡುಮಂಗಡ ಮೂಲದ ಸುನೀಲಕುಮಾರ್ ಅವರ ಪುತ್ರ ಕಾಶಿನಾಥನ್ ಮೃತರು. ಸ್ನೇಹಿತರೊಂದಿಗೆ ಆಟವಾಡಿ ಹಿಂತಿರುಗುತ್ತಿದ್ದಾಗ ಅವಘಡ ಸಂಭವಿಸಿದೆ.

ತಡವಾಗಿಯಾದರೂ ಕಾಶಿನಾಥನ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮತ್ತು ಸ್ಥಳೀಯರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಹುಡುಕಾಟ ನಡೆಸಿದ್ದಾರೆ.

ಹುಡುಕಾಟದ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಮನೆ ಸಮೀಪದ ಕ್ವಾರಿ ಹೊಂಡದಲ್ಲಿ ಕಾಶಿನಾಥನ್ ಬಿದ್ದಿರುವುದು ಪತ್ತೆಯಾಗಿದೆ. ಹಳ್ಳದ ಬಳಿ ಮಗುವಿನ ಬೂಟುಗಳು ಪತ್ತೆಯಾಗಿದೆ.

ಕೂಡಲೇ ತೀವ್ರ ಅಸ್ವಸ್ಥಗೊಂಡ ಬಾಲಕನನ್ನು ಮನಸ್ಸೇರಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಶವಾಗಾರಕ್ಕೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!