ಬೆದರಿಸಿ ಚಿನ್ನಾಭರಣ, ನಗದು ದೋಚುತ್ತಿದ್ದ ಡಕಾಯಿತಿ ಗ್ಯಾಂಗ್ ನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ಒಬ್ಬಂಟಿಯಾಗಿ ಸಾಗುವವರನ್ನು ಟಾರ್ಗೆಟ್ ಮಾಡಿ ಬೆದರಿಸಿ, ಚಿನ್ನಾಭರಣ ಮತ್ತು ನಗದು ದೋಚುತ್ತಿದ್ದ ಕುಖ್ಯಾತ ಡಕಾಯಿತಿ ಗ್ಯಾಂಗ್‌ವೊಂದನ್ನು ಸೂರ್ಯನಗರ ಪೊಲೀಸರು ಬಂಧಿಸಿದ್ದಾರೆ.
ಸುನೀಲ್ ಹಾವೇರಿ (26), ಸರವಣ ಅಲಿಯಾಸ್ ಚಿಟ್ಟಿ (32), ಕಾಂತರಾಜ (27) ಬಂಧಿತ ಆರೋಪಿಗಳು.
ಬೆಂಗಳೂರು ಹೊರವಲಯದ ಆನೆಕಲ್ ತಾಲೂಕಿನ ಸೂರ್ಯನಗರ ಪೇಸ್ – 2 ಬಳಿ ಡಕಾಯಿತರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ದೋಚಲು ಹೊಂಚು ಹಾಕುತ್ತಿದ್ದ ವೇಳೆ ಸೂರ್ಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.