ಮೇ 31ರಿಂದ ಶಾಲೆ ಆರಂಭ

ಬೆಂಗಳೂರು: ಬೇಸಿಗೆ ರಜೆ ಕಳೆದು ನೂತನ ಶೈಕ್ಷಣಿಕ ವರ್ಷ ಮೇ 31ರಂದು ಬುಧವಾರ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಶಾಲೆ ಆರಂಭವಾದ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಜೊತೆಗೆ ಕಡ್ಡಾಯವಾಗಿ ಸಿಹಿ ಪದಾರ್ಥ ನೀಡವಂತೆ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲಾ ಆಡಳಿತ ಮಂಡಳಿಗಳಿಗೆ ಸರ್ಕಾರ ಸೂಚನೆ ನೀಡಿದೆ.
ಶಾಲೆಯ ಮೊದಲ ದಿನ ಪ್ರಾರಂಭಿಸುವ ಮೊದಲು ತರಗತಿಯ ಕೊಠಡಿಗಳು, ಅಡುಗೆ ಪಾತ್ರೆಗಳು, ಆಹಾರ ಧಾನ್ಯಗಳು ಮತ್ತು ನೀರಿನ ಸಂಪ್‌ಗಳು ಸೇರಿದಂತೆ ಶಾಲೆ ಆವರಣವನ್ನು ಸ್ವಚ್ಛಗೊಳಿಸಲು ಮತ್ತು ಅನಗತ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರತಿ ತರಗತಿಗೆ ತಮ್ಮ ವೇಳಾಪಟ್ಟಿಯನ್ನು ಸಿದ್ಧವಾಗಿರಿಸಲು ನಿರ್ವಾಹಕರನ್ನು ಕೇಳಲಾಗಿದೆ.
244 ಕೆಲಸದ ದಿನಗಳು ಹೊಸ ಶಾಲಾ ವರ್ಷಕ್ಕಾಗಿ, ವರ್ಷವಿಡೀ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಶೈಕ್ಷಣಿಕ ಮಾರ್ಗಸೂಚಿಯನ್ನು ಹೊರತಂದಿದೆ.