ವಿಟ್ಲ: ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಈಜು ಸ್ಪರ್ಧೆ: ಜನಪ್ರಿಯ ಬೇಸಿಗೆ ಈಜು ಶಿಬಿರದ ಸಮಾರೋಪ

ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಆಯೋಜಿಸಿದ್ದ 22 ದಿನದ ಬೇಸಿಗೆ ಈಜು ಶಿಬಿರದ ಸಮಾರೋಪ ಜನಪ್ರಿಯ ಈಜುಕೊಳದ ಆವರಣದಲ್ಲಿ ನಡೆಯಿತು.

ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಈಜು ಕಲಿಸುವ ಉದ್ದೇಶದೊಂದಿಗೆ 22 ದಿನದ ಈಜು ಶಿಬಿರವನ್ನು ಆಯೋಜಿಸಲಾಗಿತ್ತು.
ಸುಮಾರು 50 ಮಕ್ಕಳನ್ನು ಬೆಳಿಗ್ಗೆ ಮತ್ತು ಸಂಜೆಯ ಎರಡು ಬ್ಯಾಚ್ ಗಳನ್ನಾಗಿ ಮಾಡಿ ನುರಿತ ಈಜುಗಾರ ಆನಂದ್ ಕುಮಾರ್ ಮೈಸೂರು ರವರಿಂದ 22 ದಿನಗಳ ತರಬೇತಿಯನ್ನು ನೀಡಲಾಗಿತ್ತು. ತರಬೇತಿ ಪಡೆದ ಮಕ್ಕಳಿಗೆ ಶಿಬಿರದ ಕೊನೆಯ ದಿನದಂದು ಈಜು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿಯವರು ಮಕ್ಕಳನ್ನುದ್ದೇಶಿಸಿ ಮಾತನಾಡಿ ಈಜು ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪದಕಗಳನ್ನು ನೀಡಿ ಅಭಿನಂದಿಸಿದರು.
ಶಾಲೆಯ ಪ್ರಾಂಶುಪಾಲರಾದ ಲಿಬಿನ್ ಕ್ಸೇವಿಯರ್ ರವರು ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ನೀಡಿದರು.ಕಾರ್ಯಕ್ರಮವನ್ನು ಶಾಲೆಯ ಆಡಳಿತ ಅಧಿಕಾರಿ ಸಫ್ವಾನ್ ಪಿಲಿಕಲ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪೋಷಕರು, ಸಿಬ್ಬಂದಿಗಳು ಹಾಗೂ ಮಕ್ಕಳು ಭಾಗವಹಿಸಿದ್ದರು.