ಬಂಟ್ವಾಳ: ಹುಡುಗಿ ವಿಚಾರದಲ್ಲಿ ಗಲಾಟೆ:
ಕೈ ಕತ್ತರಿಸಿ, ಕೊಲೆ ಯತ್ನಿಸಿದ ಆರೋಪಿಯ ಬಂಧನ
ಬಂಟ್ವಾಳ: ಹುಡುಗಿ ವಿಚಾರದಲ್ಲಿ ದ್ವೇಷವಾಗಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಲು ಯತ್ನಿಸಿ ವಿಫಲವಾಗಿ ಕೈಯನ್ನು ತುಂಡರಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರ ನೇತೃತ್ವದಲ್ಲಿ ಎಸ್.ಐ.ರಾಮಕೃಷ್ಣ ಅವರ ತಂಡ ಬಂಧಿಸಿದೆ.
ಬಂಟ್ವಾಳ ನಿವಾಸಿ ಶಿವರಾಜ್ ಕುಲಾಲ್ ಎಂಬಾತನ ಕೈಯನ್ನು ಆತನ ಪರಿಚಿತ ಆರೋಪಿ ಸಂತೋಷ್ ಕಡಿದಿದ್ದ. ಮೇ.21 ರಂದು ಘಟನೆ ನಡೆದಿತ್ತು. ಸಂತೋಷ್ ಎಂಬಾತನ ಅಕ್ಕನ ವಿಚಾರದಲ್ಲಿ ಶಿವರಾಜ್ ನಲ್ಲಿ ಮಾತಿಗೆ ಮಾತು ಬೆಳೆದು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಗೆ ಕತ್ತಿಯಿಂದ ಕಡಿದಿದ್ದಾನೆ. ಆದರೆ ಶಿವರಾಜ್ ಕೈಯನ್ಜು ಅಡ್ಡಹಿಡಿದ ಪರಿಣಾಮವಾಗಿ ಕೈಯ ಹಸ್ತ ತುಂಡಾಗಿ ಬಿದ್ದಿದೆ. ಕೂಡಲೇ ಶಿವರಾಜ್ ಆತನ ಸ್ನೇಹಿತರ ಮೂಲಕ ಆಸ್ಪತ್ರೆಗೆ ದಾಖಲಾಗಿದ್ದಾನೆ ಆದರೂ ಕೈಯನ್ನು ಜೋಡಿಸುವಲ್ಲಿ ವಿಫಲವಾಗಿದೆ.
ಆದರೆ ಘಟನೆ ನಡೆದ ಬಳಿಕ ಸಂತೋಷ್ ತಲೆಮರೆಸಿಕೊಂಡು ಪೋಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ. ಇಂದು ಸಂಜೆ ವೇಳೆ ಕಾರ್ಯಚರಣೆಯಲ್ಲಿದ್ದ ನಗರ ಠಾಣಾ ಪೋಲೀಸರ ತಂಡದ ಬಲೆಗೆ ಈತ ಬಿದ್ದಿದ್ದಾನೆ. ಎಸ್.ಐ.ರಾಮಕೃಷ್ಣ ಅವರ ಜೊತೆ ಅಪರಾಧ ವಿಭಾಗದ ರಾಜೇಶ್ ಮತ್ತು ಇರ್ಶಾದ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಬಂಧನ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.




