March 16, 2026

ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಿಂದ ಬೇರ್ಪಟ್ಟ ಇಂಜಿನ್: ತಪ್ಪಿದ ಭಾರೀ ಅನಾಹುತ

0
image_editor_output_image-1688722272-1685081014273.jpg

ಶಿವಮೊಗ್ಗ: ಚಲಿಸುತ್ತಿದ್ದ ರೈಲಿನ ಇಂಜಿನ್ ಕಳಚಿಹೋದ ಘಟನೆ ಇಲ್ಲಿನ ಬಿದರೆ ಬಳಿ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.

ತಾಳಗುಪ್ಪ- ಬೆಂಗಳೂರು ಎಕ್ಸ್‌ಪ್ರೆಸ್ ರೈಲಿ ನಲ್ಲಿ ಈ ಘಟನೆ ನಡೆದಿದ್ದು, ಕೆಲ ಕಾಲ ಭಯದ ವಾತಾವರಣ ಉಂಟಾಗಿತ್ತು.

ಈ ಎಕ್ಸ್ ಪ್ರೆಸ್ ರೈಲು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟಿತ್ತು. ಶಿವಮೊಗ್ಗ ಸಮೀಪದ ಬಿದರೆ ಬಳಿ ಬರುತ್ತಿದ್ದಂತೆ ಬೋಗಿಗಳಿಂದ ಇಂಜಿನ್ ಬೇರ್ಪಟ್ಟಿದೆ. ಕಪ್ಲಿಂಗ್ ಸಡಿಲಗೊಂಡ ಕಾರಣ ಬೋಗಿಗಳು ಮತ್ತು ಇಂಜಿನ್ ಬೇರೆ ಬೇರೆಯಾಗಿದೆ. ಬೋಗಿಗಳ ಬಿಟ್ಟು ಇಂಜಿನ್ ಸ್ವಲ್ಪ ದೂರ ಚಲಿಸಿದೆ.

Leave a Reply

Your email address will not be published. Required fields are marked *

error: Content is protected !!