March 16, 2026

ಹುಟ್ಟುಹಬ್ಬದ ದಿನದಂದೇ ಬಾಲಕ ಸಾವು: ಮೃತದೇಹದ ಪಕ್ಕ ಕೇಕ್ ಕತ್ತರಿಸಿದ ಕುಟುಂಬಸ್ಥರು

0
image_editor_output_image1439549361-1684737286017.jpg

ತೆಲಂಗಾಣ: ಹುಟ್ಟುಹಬ್ಬದ ದಿನದಂದೇ ಬಾಲಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ತೆಲಂಗಾಣದ ಆಸೀಫಾಬಾದ್ ಜಿಲ್ಲೆಯ ಬಾಬಾಪುರದಲ್ಲಿ ನಡೆದಿದೆ.

ಸಚಿನ್ ಹುಟ್ಟು ಹಬ್ಬದ ದಿನದಂದೇ ಹೃದಯಘಾತದಿಂದ ಮೃತಪಟ್ಟ ಬಾಲಕ. ಹದಿನಾರು ವರ್ಷದ ಬಾಲಕನ ಹುಟ್ಟುಹಬ್ಬವನ್ನು ಸಂಭ್ರಮಿಸಬೇಕಿದ್ದ ಕುಟುಂಬ ಸದಸ್ಯರು ಶೋಕದ ಮಡುವಿನಲ್ಲಿ ಮೃತ ದೇಹದ ಪಕ್ಕ ಕೇಕ್ ಕತ್ತರಿಸಿರುವ ಹೃದಯವಿದ್ರಾವಕ ಘಟನೆ ಇದಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮಧ್ಯೆ ಮನೆಯಿಂದ ಹೊರ ಹೋಗಿದ್ದ ಸಚಿನ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲೇ ಮೃತಪಟ್ಟಿದ್ದ.

ಇನ್ನೂ ಈ ವಿಚಾರ ತಿಳಿದ ಕುಟುಂಬದವರಿಗೆ ಆಘಾತಕ್ಕೊಳಗಾಗಿದ್ದು, ಮೃತದೇಹ ಮನೆಗೆ ತಂದು ಹುಟ್ಟು ಹಬ್ಬದ ಆಚರಣೆಗಾಗಿ ತಾವು ತಂದಿರಿಸಿದ್ದ ಕೇಕ್ ಅನ್ನು ಕತ್ತರಿಸಿ ಬಾಲಕನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!