ನದಿಗೆ ನೀರು ತರಲು ಹೋದ ವೇಳೆ ಮೊಸಳೆ ದಾಳಿಗೆ ಬಾಲಕ ಬಲಿ
ರಾಯಚೂರು: ಕೃಷ್ಣಾ ನದಿಗೆ ನೀರು ತರಲು ಹೋದ ವೇಳೆ ಮೊಸಳೆ ದಾಳಿಗೆ ಬಾಲಕನೋರ್ವ ಬಲಿಯಾದ ಘಟನೆ ರಾಯಚೂರು ಜಿಲ್ಲೆಯ ಕುರುವಕಲಾ ಗ್ರಾಮದಲ್ಲಿ ನಡೆದಿದೆ.
ನವೀನ್ ಕೃಷ್ಣಾ (9) ಮೊಸಳೆ ದಾಳಿಗೆ ಒಳಗಾದ ಬಾಲಕ. ಶಾಲೆಗೆ ರಜೆ ಇದ್ದ ಕಾರಣ ತಂದೆ- ತಾಯಿಯ ಜೊತೆ ಹೊಲಕ್ಕೆ ಹೋಗಿದ್ದ ನವೀನ್ ನದಿಯಲ್ಲಿ ನೀರು ತರಲು ಹೋದಾಗ ಈ ಘಟನೆ ನಡೆದಿದೆ.
ನದಿಯಲ್ಲಿ ನಾಪತ್ತೆಯಾದ ನವೀನ್ ಮೃತದೇಹಕ್ಕಾಗಿ ಕೃಷ್ಣಾ ನದಿಯಲ್ಲಿ ಹುಡುಕಾಟ ಮುಂದುವರೆದಿದೆ.




