March 24, 2026

ವಿಟ್ಲ: ಇಂಡಿಯನ್ ಗ್ಯಾಸ್ ಪೂರೈಕೆ ಸಿಬ್ಬಂದಿಗೆ ಹಲ್ಲೆ ಆರೋಪ: ಎರಡು ತಂಡದಿಂದ ಠಾಣೆಗೆ ದೂರು

0
IMG-20230515-WA0038.jpg

ವಿಟ್ಲ: ಇಂಡಿಯಾನ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ನಿರ್ವಹಿಸುವ ವ್ಯಕ್ತಿಯೋರ್ವರಿಗೆ ಗ್ರಾಹಕ ಯುವಕ ಹಲ್ಲೆ ನಡೆಸಿದ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಲಾಗಿದೆ.

ವಿಟ್ಲ ಮೇಗಿನಪೇಟೆಯಲ್ಲಿ ಸಾಯಿ ಇಂಡಿಯನ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ನಿರ್ವಹಿಸುವ ಸದಾನಂದ ಅವರುಬ ಕಮರ್ಷಿಯಲ್ ಗ್ಯಾಸ್ ಅನ್ನು ಅಂಗಡಿಗಳಿಗೆ ಕೊಂಡೊಯ್ಯುತ್ತಿದ್ದ ವೇಳೆ ಮೊನ್ನೆ ಯಾಕೆ ಗ್ಯಾಸ್ ಹಾಕಿಲ್ಲವೆಂದು ಗಲಾಟೆ ನಡೆಸಿದ್ದು, ಈ ವೇಳೆ ಅವರು ನಿನ್ನೆ ಮೊನ್ನೆಯೆಲ್ಲಾ ರಜೆ ಇತ್ತು ಹಾಗಾಗಿ ಗ್ಯಾಸ್ ಹಾಕಿಲ್ಲವೆಂದು ಹೇಳಿದ್ದು, ಆಗ ಆತ ಹಲ್ಲೆ ನಡೆಸಿದ್ದು, ಆತನೊಂದಿಗಿದ್ದರು ಸೇರಿ ಹಲ್ಲೆ ನಡೆಸಿರುವುದಾಗಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿ ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ, ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಅಂಗಡಿ ಮಾಲಕ ಅಬ್ದುಲ್ ಸಮದ್ ಅವರು ಘಟನೆ ದೃಶ್ಯದ ಸಿಸಿ ಕ್ಯಾಮಾರ ವೀಡಿಯೋ‌ ಫುಟೇಜ್ ಸಹಿತ ಪೊಲೀಸರಿಗೆ ದೂರು ನೀಡಿದ್ದಾರೆ.‌

ನಮ್ಮ ಅಂಗಡಿಗೆ ಇಂಡಿಯನ್ ಗ್ಯಾಸ್ ಸಂಸ್ಥೆಯಲ್ಲಿ ಕಳೆದ ಒಂದು ವಾರದ ಹಿಂದೆ ಅನಿಲ ಪೂರೈಕೆ ಮಾಡಲು ತಿಳಿಸಿದ್ದು, ಪೂರೈಕೆ ಮಾಡಿರುವುದಿಲ್ಲ. ಈ ಬಗ್ಗೆ ಫೋನ್ ಮಾಡಿ ವಿಚಾರಿಸಿದಾಗ ಅದರ ಸಿಬ್ಬಂದಿ ಉಡಾಫೆಯಿಂದ ಮಾತನಾಡಿ, ನಿಂದಿಸಿರುತ್ತಾನೆ ಎಂದು ಸಮದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಅದರ ಚಾಲಕ ಏಕಾಏಕಿ ಪಿಕಪ್ ವಾಹನವನ್ನು ಅಂಗಡಿ ಜಗಳಿಗೆ ನುಗ್ಗಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿರುತ್ತಾನೆ ಎಂದು ಸಮದ್ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!