ಭಾರತೀಯ ಕ್ರಿಕೆಟಿಗರಿಗೆ ಹಲಾಲ್ ಮಾಡಿದ ಮಾಂಸವನ್ನೇ ನೀಡಬೇಕು: ಬಿಸಿಸಿಐ ಆದೇಶ
ಕಾನ್ಪುರ : ನ.25ರಿಂದ ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಉತ್ತರಪ್ರದೇಶದಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಆಡುವ ಭಾರತೀಯ ಕ್ರಿಕೆಟಿಗರಿಗೆ ಹಲಾಲ್ ಮಾಡಿದ ಮಾಂಸವನ್ನೇ ನೀಡಬೇಕು ಎಂದು ಬಿಸಿಸಿಐ ಆದೇಶಿಸಿದೆ. ಇದರಿಂದ ಭಾರೀ ಚರ್ಚೆ ಸೃಷ್ಟಿಯಾಗಿದೆ.
ಸ್ವತಃ ಬಿಜೆಪಿ ವಕ್ತಾರ ಗೌರವ್ ಗೋಯೆಲ್ ಇದನ್ನು ವಿರೋಧಿಸಿ, ತಕ್ಷಣ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಈ ಬಗ್ಗೆ ಬಿಸಿಸಿಐನ ಯಾವುದೇ ಪದಾಧಿಕಾರಿಗಳು ಪ್ರತಿಕ್ರಿಯಿಸಿಲ್ಲ ಎಂದು ಪಿಟಿಐ ವರದಿ ಮಾಡಿದೆ.
ಕ್ರಿಕೆಟಿಗರು ತಮಗಿಷ್ಟ ಬಂದ ಯಾವುದೇ ಆಹಾರವನ್ನು ತಿನ್ನಲು ಸ್ವತಂತ್ರರು. ಆದರೆ ಹಲಾಲ್ ಮಾಡಿದ ಮಾಂಸವನ್ನೇ ತಿನ್ನಬೇಕು ಎಂದು ಆದೇಶಿಸಲು ಬಿಸಿಸಿಐ ಯಾರು? ಇದು ಕಾನೂನುಬಾಹಿರ, ಹೀಗೆ ನಡೆಯಲು ನಾವು ಬಿಡುವುದಿಲ್ಲ ಎಂದು ಗೌರವ್ ಕಿಡಿಕಾರಿದ್ದಾರೆ.





