March 16, 2026

ಬೆಳ್ತಂಗಡಿ ಸುರಿದ ಗಾಳಿ ಮಳೆಗೆ ರಸ್ತೆಯಲ್ಲಿ ಮರ ಬಿದ್ದು ಸಂಚಾರ ಅಸ್ತವ್ಯಸ್ತ:
ರಕ್ಷಣಾ ಕಾರ್ಯದಲ್ಲಿ ನಿರತ ಎಸ್‌ಡಿಪಿಐ ಕಾರ್ಯಕರ್ತರು

0
IMG-20230511-WA0003.jpg

ಬೆಳ್ತಂಗಡಿ: ಮಧ್ಯಾಹ್ನ ನಂತರ ಬೆಳ್ತಂಗಡಿ ಸುರಿದ ಗಾಳಿ ಮಳೆಗೆ ವಿವಿಧ ಕಡೆ ಮರಗಳು, ವಿದ್ಯುತ್ ಕಂಬಗಳಿಗೆ ರಸ್ತೆ ಮಧ್ಯದಲ್ಲಿ ಬಿದ್ದಿದ್ದು ರಸ್ತೆ ಸಂಚಾರ ಅಸ್ತವ್ಯಸ್ತ ಉಂಟಾಗಿದೆ.
ರಾಜ್ಯ ಹೆದ್ದಾರಿಯಲ್ಲಿ ಮರಗಳು ಮುರಿದು ಬಿದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ಸೇರಿ ಎಸ್‌ಡಿಪಿಐ ಕಾರ್ಯಕರ್ತರಿಂದ ತೆರವು ಕಾರ್ಯ ನಡೆಯುತ್ತಿದೆ.

ತಾಲೂಕಿನ ಬೆಳ್ತಂಗಡಿ ನಗರ, ಗುರುವಾಯನಕೆರೆ, ಕುವೆಟ್ಟು ಗ್ರಾಮ, ಅಳದಂಗಡಿ, ಉಜಿರೆ ಭಾಗದಲ್ಲಿ ಧಾರಾಕಾರ ಗಾಳಿ ಮಳೆ ಸುರಿದಿದ್ದು, ಅಪಾರ ನಷ್ಟವನ್ನು ಜನರು ಅನುಭವಿಸಿದ್ದಾರೆ. ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದಿದೆ.

Leave a Reply

Your email address will not be published. Required fields are marked *

error: Content is protected !!