ವಾಲ್ ಚೇಂಬರ್ ಗೆ ಬಿದ್ದು ಕಾರ್ಮಿಕ ಮೃತ್ಯು
ಬೆಂಗಳೂರು: BWSSB ವಾಲ್ ಚೇಂಬರ್ ಗೆ ಬಿದ್ದಿದ್ದ ಕಾರ್ಮಿಕ ದುರ್ಮರಣನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೂಕ್ತ ಸಮಯಕ್ಕೆ ಆಯಂಬುಲೆನ್ಸ್ ಬರದಿದ್ದು, ಕಾರ್ಮಿಕ ಸಾವನ್ನಪ್ಪಿದ್ದಾರೆ. ವಾಲ್ ಚೇಂಬರ್ಗೆ ಬಿದ್ದಿದ್ದ ಮೋಹನ್ (31) ಆಟೋದಲ್ಲಿ ಬೌರಿಂಗ್ ಆಸ್ಪತ್ರೆಗೆ ಸಾಗಿಸುವಾಗ ಕಾರ್ಮಿಕ ಮೃತಪಟ್ಟಿದ್ದಾರೆ.
ಸುಮಾರು 20 ನಿಮಿಷ ಕಾದರೂ ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ನಂ. 6 ಬಳಿಯ ಚೇಂಬರ್ ಸಮೀಪಕ್ಕೆ ಆಂಬುಲೆನ್ಸ್ ಬಂದಿರಲಿಲ್ಲ. ಪ್ರಜ್ಞೆ ತಪ್ಪಿ ವಾಲ್ ಚೇಂಬರ್ನಲ್ಲಿ ಮೋಹನ್ ಕುಸಿದುಬಿದ್ದಿದ್ದರು. BWSSB ನೀರಿನ ವಾಲ್ ತಿರುಗಿಸಲು ಹೋಗಿದ್ದ ವೇಳೆ ಘಟನೆ ಸಂಭವಿಸಿದೆ. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.





