ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 79.91 ಮತದಾನ
ಮಂಗಳೂರು: ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಶೇ.75.87 ಮತದಾನವಾಗಿದೆ.
ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 1,04,918 ಪುರುಷ ಮತ್ತು 1,07,832 ಮಹಿಳೆ ಹಾಗೂ ಇತರ 3 ಸಹಿತ 2,12,753 ಮತದಾರರ ಪೈಕಿ 83,876 ಪುರುಷ, 86,125 ಮಹಿಳೆ ಹಾಗೂ ಇತರ 1 ಸಹಿತ 1,70002 ಮಂದಿ ಮತದಾನಗೈದಿದ್ದಾರೆ. 42,751 ಮಂದಿ ಮತದಾನದಿಂದ ದೂರ ಉಳಿದಿದ್ದು, ಶೇ. 79.91 ಮತದಾನವಾಗಿದೆ.





