ಬಿಜೆಪಿ ಧ್ವಜವಿರುವ ಕಾರು ನಿಲ್ಲಿಸಿದ್ದಕ್ಕಾಗಿ ಗಲಾಟೆ
ಮಸ್ಕಿ: ಪಟ್ಟಣದಲ್ಲಿನ ಮತಗಟ್ಟೆ 89ರಲ್ಲಿ ಮತಯಂತ್ರ ದೋಷದಿಂದ ತಡವಾಗಿ ಮತದಾನ ಆರಂಭವಾದರೆ, ಮತಗಟ್ಟೆ ಮುಂದೆಯೆ ಮಾಜಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಧ್ವಜವಿರುವ ಕಾರು ನಿಲ್ಲಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಇನ್ನು ಮತಗಟ್ಟೆ ಸಂಖ್ಯೆ 88ರ ಮುಂದೆಯೇ ಪ್ರತಾಪಗೌಡ ಪಾಟೀಲ್ ಮನೆ ಇದ್ದು, ಬಿಜೆಪಿ ಧ್ವಜ ಬಳಸಿದ ಕಾರು ನಿಲ್ಲಿಸಿದ್ದರಿಂದ ಕೆಲ ಕಾಲ ಗೊಂದಲ ಉಂಟಾಗಿ ವಿವಾದಕ್ಕೆ ಇಡಾಯಿತು. ತಾಲೂಕಿನ ಗುಂಡಾ ಗ್ರಾಮದಲ್ಲಿ ಮತದಾನ ಕೇಂದ್ರ ಹಾಗೂ ಕೆಲ ಕಡೆಗಳಲ್ಲಿ ವಾಮಾಚಾರ ನಡೆದಿದೆ ಎಂದು ಗಲಾಟೆ ನಡೆದ ಘಟನೆಗಳು ಕೂಡ ವರದಿಯಾಗಿವೆ.


