ವಿಟ್ಲ: ಮತಗಟ್ಟೆಯಲ್ಲಿ ಮೊಬೈಲ್ ಫೋನ್ ಗೊಂದಲ
ಬೆಳಗ್ಗೆ 6:30 ರಿಂದಲೇ ಮತದಾರರು ಮತಗಟ್ಟೆಗೆ ಉತ್ಸಾಹದಿಂದ ಆಗಮಿಸಿ ಸರತಿ ಸಾಲಲ್ಲಿ ನಿಂತಿರುವ ದೃಶ್ಯ ವಿಟ್ಲ ಭಾಗದ ಹಲವು ಕಡೆ ಕಂಡು ಬಂದಿದೆ.
ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರೇ ಹೆಚ್ಚಾಗಿ ಬೆಳ್ಳಂಬೆಳಗ್ಗೆ ಆಗಮಿಸಿದ್ದು, ಬಹುತೇಕ ಜನರಿಗೆ ಮತಗಟ್ಟೆಗೆ ಮೊಬೈಲ್ ಫೋನ್ ಕೊಂಡೊಯ್ಯಬಾರದು ಎಂಬ ಜಿಲ್ಲಾಧಿಕಾರಿಗಳ ಕೊನೇ ಘಳಿಗೆಯ ನಿಯಮ ತಿಳಿಯದೇ ಇದ್ದುದರಿಂದ ಗೊಂದಲಕ್ಕೆ ಕಾರಣವಾಯಿತು. ಪೊಲೀಸರು ಮತಗಟ್ಟೆ ಪರಿಸರದದ ಒಳ ಪ್ರವೇಶಿಸುವಾಗಲೇ ಮೊಬೈಲ್ ಇದ್ದರೆ ಹೊರಗೆ ಬಿಟ್ಟು ಬನ್ನಿ ಎಂದು ಪುನಃ ಕಳುಹಿಸುತ್ತಿದ್ದರು. ಖಾಸಗಿ ವಾಹನ ಇದ್ದವರು ಅದರಲ್ಲಿಟ್ಟರೆ ವಾಹನ ಇಲ್ಲದವರು ಪರದಾಡಬೇಕಾಯಿತು. ಮತಗಟ್ಟೆ ತನಕ ಕೊಂಡೊಯ್ದವರಲ್ಲಿ ಅಧಿಕಾರಿಗಳು ಸ್ವಿಚ್ ಆಫ್ ಮಾಡಿ ಹಿಡ್ಕೊಳ್ಳಿ ಅಂತ ಹೇಳುತ್ತಿದ್ದ ದೃಶ್ಯ ಕಂಡುಬಂತು.




