June 27, 2026

ಬಂಟ್ವಾಳ: ಮನೆ ಮನೆಗೆ ತೆರಳಿ ಮಕ್ಕಳಿಂದಲೇ ಮತದಾನದ ಜಾಗೃತಿ: ಮಕ್ಕಳ ತಂಡದ ಕಾರ್ಯಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ

0
20230509_200016.jpg

ಬಂಟ್ವಾಳ: ಬಾಳ್ತಿಲ ಗ್ರಾಮದ ಕಶೆಕೋಡಿ ಭಾಗದಲ್ಲಿ ನಾಲ್ವರು ಮಕ್ಕಳೇ ಸೇರಿಕೊಂಡು ಮನೆ ಮನೆ ಗಳಿಗೆ ತೆರಳಿ ಮತದಾನದ ಜಾಗೃತಿ ಮೂಡಿಸುತ್ತಿದ್ದ ತಂಡದ ಕಾರ್ಯಕ್ಕೆ ಜಿಲ್ಲಾಧಿಕಾರಿ ರವಿಕುಮಾರ್ ಎಂ. ಆರ್ ಹಾಗೂ ಜಿ.ಪಂ. ಸಿಇಓ ಡಾ. ಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಲಕಿ ಸನ್ನಿಧಿ ನೇತೃತ್ವದಲ್ಲಿ ಸಮೃದ್ಧಿ, ಪ್ರಣಮ್ಯಾ, ನಿರೀಕ್ಷಾ, ಕೀರ್ತಿ ಅವರು ಜಾಗೃತಿ ಕಾರ್ಯ ನಡೆಸುತ್ತಿದ್ದರು.

ಸೋಮವಾರ ಸನ್ನಿಧಿಯನ್ನು ತಮ್ಮ ಕಚೇರಿಯಲ್ಲಿ ಭೇಟಿ ಮಾಡಿದ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ರವರು ಪುಸ್ತಕ ಬಹುಮಾನ ನೀಡಿ ಅಭಿನಂದಿಸಿದ್ದಾರೆ.

ಇನ್ನು ಮುಂದೆಯೂ ಇದೇ ರೀತಿ ಜಾಗೃತಿ ಕಾರ್ಯ ಮಾಡಲು ಪ್ರೇರಣೆ ನೀಡಿ, ನಿಮ್ಮಂತಹ ಪ್ರತಿಭೆಗಳು ಜಿಲ್ಲಾಧಿಕಾರಿಗಳು ಸೇರಿದಂತೆ ಇನ್ನಿತರ ಉನ್ನತ ಮಟ್ಟದ ಸ್ಥಾನಕ್ಕೆ ಬರಬೇಕು ಎಂದು ಹಾರೈಸಿದರು.

Leave a Reply

Your email address will not be published. Required fields are marked *

error: Content is protected !!