March 16, 2026

ಉಳ್ಳಾಲ: ಬಾಗಿಲಲ್ಲಿ ಕಾಂಡೋಂ ಇಟ್ಟು, ಒಳ ಉಡುಪು ಕದ್ದು ವಿಕೃತಿ ಮೆರೆದ ದುಷ್ಕರ್ಮಿಗಳು

0
IMG-20230509-WA0038.jpg

ಉಳ್ಳಾಲ: ಮನೆಯ ಬಾಲ್ಕನಿ ಮತ್ತು ಟೆರೇಸ್ ಅಲ್ಲದೆ ಮನೆಯಂಗಳದಲ್ಲಿ ಒಣ ಹಾಕಿದ್ದ ಮಹಿಳೆಯರ ಬೆಲೆ ಬಾಳುವ ಸಲ್ವಾರ್, ಒಳ ಉಡುಪುಗಳನ್ನು ಕದ್ದೊಯ್ದದಲ್ಲದೆ, ಮನೆ ಬಾಗಿಲ ಲಾಕರ್ ಗೆ ಕಿಡಿಗೇಡಿಗಳು ಕಾಂಡೊಮ್ ಸಿಕ್ಕಿಸಿ ವಿಕೃತಿ ಮೆರೆದ ಘಟನೆ ನಿನ್ನೆ ರಾತ್ರಿ ಉಳ್ಳಾಲ ಬೈಲಿನಲ್ಲಿ ನಡೆದಿದೆ.

ಉಳ್ಳಾಲ ಬೈಲಿನ ಗೇರು ಕೃಷಿ ಸಂಶೋಧನಾ ಕೇಂದ್ರದ ಬಳಿಯ ಸುಂದರ್ ಎನ್ನುವವರ ಮನೆ ಮೇಲಿರುವ ಬಾಡಿಗೆ ನಿವಾಸಿಗಳ ಬೆಲೆ ಬಾಳುವ ಬಟ್ಟೆಗಳನ್ನು ಯಾರೋ ವಿಕೃತರು ಕಳವುಗೈದಿದ್ದಾರೆ.

ಬಾಡಿಗೆ ಮನೆಯ ಮಹಿಳೆ ಮತ್ತು ಆಕೆಯ ಮಗಳ ಬೆಲೆ ಬಾಳುವ ಸಲ್ವಾರ್, ಮತ್ತು ಒಳ ಉಡುಪುಗಳನ್ನ ಬಾಲ್ಕನಿ ಮತ್ತು ಟೆರೇಸ್ ಮೇಲೆ ನಿನ್ನೆ ಸಂಜೆ ಒಣ ಹಾಕಲಾಗಿತ್ತು. ಇಂದು ಬೆಳಿಗ್ಗೆ ಬಾಡಿಗೆ ಮನೆ ಯಜಮಾನ ಎದ್ದಾಗ ಮುಖ್ಯ ಬಾಗಿಲಿನ ಲಾಕರ್ಗೆ ಕಾಂಡೊಮನ್ನ ಸಿಕ್ಕಿಸಿರುವುದು ಬೆಳಕಿಗೆ ಬಂದಿದೆ. ಸ್ವಲ್ಪ ಹೊತ್ತಲ್ಲಿ ಒಣ ಹಾಕಲಾಗಿದ್ದ ಮಹಿಳೆಯರ ಉಡುಪುಗಳು ಕಳವಾಗಿದ್ದು ತಿಳಿದಿದೆ.

ಇನ್ನು ವಿಶೇಷವೆಂದರೆ ಬಾಡಿಗೆ ಯಜಮಾನನ ಬೆಲೆ ಬಾಳುವ ಶರ್ಟ್ ,ಟಿ ಶರ್ಟ್, ಪ್ಯಾಂಟ್ ಗಳನ್ನ ಬಿಟ್ಟು ಹೋಗಿದ್ದಾರೆ. ಪಕ್ಕದ ಮನೆಯಿಂದಲೂ ಮಹಿಳೆಯರ ಉಡುಪು ,ಒಳ ಉಡುಪುಗಳನ್ನ ಕದ್ದೊಯ್ಯಲಾಗಿದೆ. ರೂ. 7 ಸಾವಿರ ಬೆಲೆಬಾಳುವ ಉಡುಪನ್ನು ಕಳವುಗೈಯ್ಯಲಾಗಿದೆ. ಮೇಲ್ನೋಟಕ್ಕೆ ಯಾರೋ ವಿಕೃತ ಕಾಮಿಗಳೇ ಈ ಕೃತ್ಯ ನಡೆಸಿರುವುದಾಗಿ ಶಂಕಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!