March 16, 2026

ಅವಳಿ ಸಹೋದರಿಯರ ಖಾಸಗಿ ಅಂಗವನ್ನು ಸಿಗರೇಟಿನಿಂದ ಸುಟ್ಟು ಕಿರುಕುಳ: ವೈದ್ಯ ದಂಪತಿಯನ್ನು ಬಂಧಿಸಿದ ಪೊಲೀಸರು

0
image_editor_output_image-894225307-1683608912476.jpg

ಗುವಾಹಟಿ: ಅವಳಿ ಸಹೋದರಿಯರನ್ನು ಮನೆಯಲ್ಲಿರಿಸಿ ಮಕ್ಕಳಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವೈದ್ಯ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಡಾ. ವಲಿಯುಲ್ ಇಸ್ಲಾಂ ಮತ್ತು ಮನೋವೈದ್ಯ ಡಾ. ಸಂಗೀತಾ ದತ್ತಾ ಹಾಗೂ ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಿನಾಥ್ ಬಂಧಿತರು.

“ವೈದ್ಯ ದಂಪತಿಗಳು ರೋಮಾ ಎನ್‌ಕ್ಲೇವ್‌ನ ನಾಲ್ಕನೇ ಮಹಡಿಯಲ್ಲಿ ಅಪ್ರಾಪ್ತ ಬಾಲಕಿಯರನ್ನು ಬಂಧಿಯಾಗಿರಿಸಿದ್ದಾರೆ. 3 ವರ್ಷದ ಬಾಲಕಿಯ ಖಾಸಗಿ ಭಾಗಗಳಲ್ಲಿ ಸುಟ್ಟ ಗಾಯಗಳಾಗಿದ್ದು, ಆಕೆಯ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿವೆ. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಖಾಸಗಿ ಭಾಗಗಳನ್ನು ಸಿಗರೇಟಿನಿಂದ ಸುಟ್ಟಿರುವುದು ಕಂಡುಬಂದಿದೆ” ಎಂದು ಗುವಾಹಟಿ ಪೊಲೀಸ್ ಕಮಿಷನರ್ ದಿಗಂತ ಬರಾಹ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!