March 16, 2026

ಬೈಕ್‌ ಗಳಿಗೆ ಟ್ಯಾಂಕರ್‌ ಢಿಕ್ಕಿ: ಇಬ್ಬರು ಸಾವು

0
image_editor_output_image1302302590-1683608584690.jpg

ಮಹಾರಾಷ್ಟ್ರ: ಬೈಕ್‌ ಗಳಿಗೆ ಟ್ಯಾಂಕರ್‌ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಕಚ್ಚಾ ಮದ್ಯವನ್ನು ಸಾಗಿಸುತ್ತಿದ್ದ ಟ್ಯಾಂಕರ್ ಪುಣೆ ನಗರದ ಹಡಪ್ಸರ್ ಕೈಗಾರಿಕಾ ಪ್ರದೇಶಕ್ಕೆ ತೆರಳುತ್ತಿದ್ದಾಗ ಪುಣೆ-ಸಾಸ್ವಾದ್ ರಸ್ತೆಯ ಡೈವ್ ಘಾಟ್ ವಿಭಾಗದಲ್ಲಿ ರಾತ್ರಿ 8:30 ರ ಸುಮಾರಿಗೆ ಎರಡು ಬೈಕ್‌ ಗಳಿಗೆ ಢಿಕ್ಕಿ ಹೊಡೆದು 50-60 ಅಡಿ ಆಳದ ಕಮರಿಗೆ ಉರುಳಿ ಬಿದ್ದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

ಬ್ರೇಕ್‌ ಫೇಲ್‌ ಆದ ಪರಿಣಾಮ ಈ ಘಟನೆ ನಡೆದಿದೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ಟ್ಯಾಂಕರ್‌ ಚಾಲಕ ಹಾಗೂ ಇನ್ನೊಬ್ಬ ವ್ಯಕ್ತಿಗೆ ಗಾಯಗಳಾಗಿವೆ. ಟ್ಯಾಂಕರ್‌ ಬೆಂಕಿ ತಗುಲಬಾರದೆನ್ನುವ ನಿಟ್ಟಿನಲ್ಲಿ ಅಗ್ನಿಶಾಮಕ ದಳದವರು ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!