ತಂದೆ ಓಡಿಸಿದ ಕಾರು ಆಕಸ್ಮಿಕವಾಗಿ ಸ್ವಂತ ಮಗನ ಮೇಲೆ ಹರಿದು, ಮಗು ಮೃತ್ಯು
ತೆಲಂಗಾಣ: ತಂದೆ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ನಾಲ್ಕು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಹೈದರಾಬಾದ್‌ನ ಎಲ್‌ಬಿ ನಗರದಲ್ಲಿ ಭಾನುವಾರ ನಡೆದಿದೆ. ಭದ್ರತಾ ಸಿಬ್ಬಂದಿ ಲಕ್ಷ್ಮಣ ಅವರ ಪುತ್ರ ಸಾತ್ವಿಕ್ ಮನ್ಸೂರಾಬಾದ್‌ನ ವಸತಿ ಪ್ರದೇಶದಲ್ಲಿ ಅಪಘಾತದಲ್ಲಿ ಮೃತಪಟ್ಟ ಬಾಲಕ. ಅಪಘಾತದ ದೃಶ್ಯಗಳು ಅಪಾರ್ಟ್‌ಮೆಂಟ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಲಕ್ಷ್ಮಣ್ ಅವರು ಅಪಾರ್ಟ್‌ಮೆಂಟ್‌ನ ಹೊರಗಿನ ಲೇನ್‌ನಲ್ಲಿ ನಿಲ್ಲಿಸಿದ್ದ ಎಸ್‌ಯುವಿಯಲ್ಲಿದ್ದರು. ಸಾತ್ವಿಕ್ ಮತ್ತೊಂದು ಮಗುವಿನೊಂದಿಗೆ ಆಟವಾಡಲು ಗೇಟ್‌ನಿಂದ ಹೊರಗೆ ಓಡಿದನು. ಸಾತ್ವಿಕ್ ಕಾರಿನ ಹಿಂದೆ ಓಡಿ ತಕ್ಷಣ ಎದುರಿಗೆ ಬಂದರೂ ಲಕ್ಷ್ಮಣ್ ನೋಡಲಿಲ್ಲ. ಕಾರು ಮುಂದೆ ಸಾಗುತ್ತಿದ್ದಂತೆ ಬಾಲಕ ಕಾರಿನ ಕೆಳಗೆ ಬಿದ್ದಿದ್ದಾನೆ. ತಕ್ಷಣ ಕಾರನ್ನು ನಿಲ್ಲಿಸಿ ಸಾತ್ವಿಕ್‌ನನ್ನು ಅಪಾರ್ಟ್‌ಮೆಂಟ್‌ನೊಳಗೆ ಕರೆದುಕೊಂಡು ಹೋದ ಲಕ್ಷ್ಮಣ್ ಗಾಬರಿಗೊಂಡಿದ್ದು ಕೂಡ ವಿಡಿಯೋದಲ್ಲಿದೆ.
ತೀವ್ರವಾಗಿ ಗಾಯಗೊಂಡಿದ್ದ ಸಾಥ್ವಿಕ್‌ನನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಲ್ಲಿನ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆ ಕುರಿತು ಎಲ್ ಬಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





