ಹಾಡುಹಗಲೇ ಪಾಲಿಕೆ ಸದಸ್ಯೆಯ ಪತಿಯ ಮೇಲೆ ಗುಂಡಿನ ದಾಳಿ: ಎದೆ, ಹಣೆಗೆ ಗುಂಡು ತಗಲಿ ಸ್ಥಳದಲ್ಲೇ ಸಾವು
ವಿಜಯಪುರ: ನಗರದಲ್ಲಿ ಹಾಡುಹಗಲೇ ಪಾಲಿಕೆ ಸದಸ್ಯೆಯ ಪತಿ, ರೌಡಿಶೀಟರ್ ಮೇಲೆ ಗುಂಡಿನ ದಾಳಿ ನಡೆಸಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಶನಿವಾರ ನಗರದ ವಜ್ರಹನುಮಾನ ಪ್ರದೇಶದ ಚಾಂದಪೂರ ಕಾಲೋನಿ ಪ್ರದೇಶದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ರೌಡಿ ಶೀಟರ್ ಹೈದರ್ ನದಾಫ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಹೈದರ್ ರಕ್ತದ ಮಡುವಿನಲ್ಲಿ ಜೀವ ಬಿಟ್ಡಿದ್ದಾನೆ.
ಎದೆ ಹಾಗೂ ಹಣೆಗೆ ಗುಂಡುಗಳು ತಗುಲಿದ್ದು, ಆರು ಗುಂಡುಗಳು ದೇಹ ಹೊಕ್ಕಿವೆ. ಗುಂಡಿನ ದಾಳಿ ನಡೆಸಿದ ದಾಳಿಕೋರರು ಪರಾರಿಯಾಗಿದ್ದಾರೆ.
ಹೈದರ್ ಪತ್ನಿ ನಿಶಾತ್ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ವಾರ್ಡ್ ನಂಬರ್ 19ರ ಎಂಐಎಂ ಪಕ್ಷದ ಸದಸ್ಯೆ.




