February 3, 2026

ಮಂಗಳೂರು: ಜುಗಾರಿ ಅಡ್ಡೆಗೆ ಪೊಲೀಸರ ದಾಳಿ, 10 ಮಂದಿ ಆರೋಪಿಗಳ ಬಂಧನ

0
image_editor_output_image104600304-1683353813960.jpg

ಮಂಗಳೂರು: ಮಂಗಳೂರು ನಗರ ಹೊರವಲಯದ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಸಮೀಪದ ತಚ್ಚಣಿ ಎಂಬಲ್ಲಿ ಜುಗಾರಿ ಅಡ್ಡೆಗೆ ಉಳ್ಳಾಲ ಪೊಲೀಸರು ದಾಳಿ ನಡೆಸಿದ್ದಾರೆ.

ಮಂಜೇಶ್ವರ ನಿವಾಸಿ ಅಶ್ವತ್, ಸುಂಕದಕಟ್ಟೆ ನಿವಾಸಿ ಅಕ್ಬರ್, ಬೀರಿ ನಿವಾಸಿ ಅಬ್ಬಾಸ್, ಮಾಡೂರು ನಿವಾಸಿ ಅಮೀನ್, ಮಾರಿಪಳ್ಳ ನಿವಾಸಿ ಶಂಶೀರ್, ಅಡ್ಯಾರ್ ನಿವಾಸಿ ಅಶ್ವಿತ್, ಇಸ್ಮಾಯಿಲ್, ಬಜಾಲ್ ನಿವಾಸಿ ಹರೀಶ್ ಎಂಬ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇವರಿಂದ 8 ಬೈಕ್, ಒಂದು ಅಟೋರಿಕ್ಷಾ, 14500 ನಗದು ಹಣವನ್ನು ವಶಪಡಿಸಿ ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!