March 24, 2026

ಜಮೀನು ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ: ಓರ್ವನ ಕೊಲೆಯಲ್ಲಿ ಅಂತ್ಯ

0
image_editor_output_image-299220956-1683348379998.jpg

ಚಿಕ್ಕಮಗಳೂರು: ಜಮೀನಿಗೆ ಹೋಗುವ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿಕ್ಕಹಳ್ಳ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಪ್ರವೀಣ್ (40) ಎಂದು ಗುರುತಿಸಲಾಗಿದೆ. ಮೃತ ಪ್ರವೀಣ್ ಕುಟುಂಬಕ್ಕೂ ವಿರೋಧಿ ಕುಟುಂಬಕ್ಕೂ ಕಳೆದ ಕೆಲ ವರ್ಷಗಳಿಂದ ವಿವಾದ ನಡೆಯುತ್ತಲೇ ಇತ್ತು.

ರಸ್ತೆ ಗಲಾಟೆ ಕೋರ್ಟ್ ಮೆಟ್ಟಿಲು ಏರಿ, ಕೋರ್ಟ್ ತೀರ್ಮಾನ ಕೂಡ ಪ್ರವೀಣ್ ಪರವಾಗಿ ಬಂದಿತ್ತು ಎಂದು ಪ್ರವೀಣ್ ಕುಟುಂಬ ಮಾಹಿತಿ ನೀಡಿದೆ. ಆದರೂ ವಿವಾದ ನಡೆಯುತ್ತಲೇ ಇತ್ತು.

ಅಷ್ಟೇ ಅಲ್ಲದೆ, ಪ್ರವೀಣ್ ವಿರೋಧಿ ಕುಟುಂಬಕ್ಕೆ ಜಮೀನಿಗೆ ಹೋಗಲು ಬೇರೆ ರಸ್ತೆ ಕೂಡ ಇತ್ತು. ಆದರೆ, ಆ ಕುಟುಂಬ ಇದೇ ರಸ್ತೆ ಮೇಲೆ ಹೆಚ್ಚು ಅವಲಂಬಿತವಾಗಿತ್ತು.

Leave a Reply

Your email address will not be published. Required fields are marked *

error: Content is protected !!