March 24, 2026

ಸುಳ್ಯ ನಗರ ಪಂಚಾಯತ್‌ ಮಾಜಿ ಅಧ್ಯಕ್ಷನ ಮನೆಗೆ ನುಗ್ಗಿದ ಕಳ್ಳರು: 20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

0
image_editor_output_image-315628630-1683191234538.jpg

ಸುಳ್ಯ ನಗರ ಪಂಚಾಯತ್‌ ಮಾಜಿ ಅಧ್ಯಕ್ಷನ ಮನೆಗೆ ಕಳ್ಳರು ನುಗ್ಗಿ ಬರೋಬ್ಬರಿ 20 ಲಕ್ಷ ಮೌಲ್ಯದ ಚಿನ್ನಾಭರಣ ಕಳವುಗೈದಿರುವುದಾಗಿ ಬಗ್ಗೆ ವರದಿಯಾಗಿದೆ.

ಸಂಶುದ್ದೀನ್ ಕುಟುಂಬ ಮಂಗಳೂರಿಗೆ ಕಾರ್ಯಕ್ರಮಕ್ಕೆಂದು ಹೋಗಿದ್ದು, ರಾತ್ರಿ ವಾಪಾಸ್‌ ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲು ಒಡೆದಿರುವುದು ಕಂಡು ಬಂದಿದೆ. ಒಳ ಹೋಗಿ ನೋಡಿದಾಗ ಕಪಾಟುಗಳ ಬಾಗಿಲು ಒಡೆಯಲಾಗಿತ್ತು. ಸ್ಥಳಕ್ಕೆ ಸುಳ್ಯ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ.

ಮನೆಯಿಂದ ಬೆಲೆಬಾಳುವ 14 ಬ್ರಾಂಡೆಡ್ ವಾಚ್, 20 ಚಿನ್ನದ ಉಂಗುರ, 3 ಪೆಂಡೆಂಟ್‌ ಡೈಮಂಡ್ ಬ್ರಾಸ್ಲೈಟ್ 2, ಡೈಮಂಡ್ ಸರ 1 ಸಹಿತ 55 ಸಾವಿರ ನಗದು ಸೇರಿ ಒಟ್ಟು 20 ಲಕ್ಷ ಮೌಲ್ಯದ ಆಭರಣ ಕಳವಾಗಿರುವ ಮಾಹಿತಿ ಲಭಿಸಿದೆ.

Leave a Reply

Your email address will not be published. Required fields are marked *

error: Content is protected !!