March 16, 2026

ಉಪ್ಪಿನಂಗಡಿ: ಸರಣಿ ಕಳ್ಳತನ: ಕಳ್ಳತನ ದೃಶ್ಯ ಸಿಸಿ ಟಿವಿ ಯಲ್ಲಿ ಸೆರೆ

0
IMG-20230501-WA0003.jpg

ಪುತ್ತೂರು: ಉಪ್ಪಿನಂಗಡಿಯ ಬ್ಯಾಂಕ್ ಸ್ಟ್ರೀಟ್‌ ನಲ್ಲಿರುವ ಏಳು ಅಂಗಡಿಗಳಿಗೆ ಕಳ್ಳನೊಬ್ಬ ನುಗ್ಗಿ ಸಾಮಗ್ರಿಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಕಳ್ಳನು ಚಿನ್ನ ಮತ್ತು ಬೆಳ್ಳಿ ಮಾರಾಟ ಮಾಡುವ ಅಂಗಡಿಯೊಂದಕ್ಕೆ ನುಗ್ಗಿ ಸೇಫ್ ಲಾಕರ್‍ ಅನ್ನು ತೆರೆಯಲು ಸಾಧ್ಯವಾಗದ ಕಾರಣ, ಡ್ರಾಯರ್ ನಲ್ಲಿ ಇರಿಸಲಾದ ಹಣವನ್ನು ತೆಗೆದು, ಬಳಿಕ ಸಮೀಪದ ಮೆಡಿಕಲ್ ಶಾಪ್ ಛಾವಣಿಯ ಮೂಲಕ ನುಗ್ಗಿ ಮೊಬೈಲ್ ಕದ್ದಿದು, ನಂತರ ಅದೇ ಕಟ್ಟಡದಲ್ಲಿರುವ ಬಟ್ಟೆ ಅಂಗಡಿಗೆ ನುಗ್ಗಿದ ಕಳ್ಳ ಎರಡು ಬಾತ್ ಟವೆಲ್ ಕದ್ದಿದ್ದಾನೆ.

ಇನ್ನು ಅದೇ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಬಳಿಯ ಹೋಟೆಲ್, ಪೀಠೋಪಕರಣಗಳ ಅಂಗಡಿ, ಜನರಲ್ ಸ್ಟೋರ್, ದಿನಸಿ ಅಂಗಡಿಗಳಿಗೂ ಕಳ್ಳರು ನುಗ್ಗಿ ಸಿಕ್ಕಿದ್ದನ್ನೆಲ್ಲಾ ತೆಗೆದುಕೊಂಡು ಹೋಗಿದ್ದಾರೆ. ಫರ್ನಿಚರ್ ಅಂಗಡಿಯಲ್ಲಿದ್ದ ದುಬಾರಿ ಬೆಲೆಯ ವಾಚ್ ಕಳ್ಳತನವಾಗಿದೆ. ಈ ಎಲ್ಲಾ ಏಳು ಕಳ್ಳತನಗಳು ಒಂದೇ ರೀತಿಯದ್ದಾಗಿದ್ದು, ಒಬ್ಬ ವ್ಯಕ್ತಿ ಮಾತ್ರ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!