March 19, 2026

ಕೋಟ: ಕಾರು ಢಿಕ್ಕಿ: ಸೈಕಲ್ ಸವಾರ ಸ್ಥಳದಲ್ಲೇ ಮೃತ್ಯು
 

0
IMG-20230306-WA0037.jpg

ಕೋಟ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೈಕಲ್‌‌ಗೆ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಸಾಲಿಗ್ರಾಮ ಡಿವೈನ್ ಪಾರ್ಕ್ ಎದುರುಗಡೆ ಶನಿವಾರ ನಡೆದಿದೆ.

ಸೈಕಲ್ ಸವಾರ ಗುಂಡ್ಮಿ ಭಗವತಿ ರಸ್ತೆಯ ಕೇಶವ ಮರಕಾಲ (41) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ಉಡುಪಿಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿ ಬಂದ ಚಾಲಕನ ನಿಯಂತ್ರಣ ತಪ್ಪಿ ಗುಂಡ್ಮಿಯಿಂದ ಸಾಲಿಗ್ರಾಮ ಕಡೆ ಹೋಗುತ್ತಿದ್ದ ಸೈಕಲ್ ಸವಾರನಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಕಾರು ಪಲ್ಟಿ ಹೊಡೆದಿದ್ದು, ಸೈಕಲ್ ಸವಾರ ಕೇಶವ ಮರಕಾಲ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರು ಚಾಲಕ ಸಣ್ಣ ಪುಟ್ಟಗಾಯಗಳಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಾರು ಚಾಲಕನ ನಿರ್ಲಕ್ಷ್ಯ ವೇ ಅಪಘಾತ ಕ್ಕೆ ಕಾರಣ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!