March 24, 2026

ಉಳ್ಳಾಲ: ಮಾವಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

0
IMG-20230429-WA0040.jpg

ಉಳ್ಳಾಲ: ಮರದಿಂದ ಬಿದ್ದು ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತ ಪಟ್ಟ ಘಟನೆ ಉಳ್ಳಾಲದ ಅಬ್ಬಕ್ಕ ವೃತ್ತದ ಬಳಿಯ ಬೀಚ್ ರಸ್ತೆಯಲ್ಲಿ ಶನಿವಾರ ನಡೆದಿದೆ.

ಉಳ್ಳಾಲ ಮೊಗವೀರ ಪಟ್ಣ ನಿವಾಸಿ ನಿತಿನ್ ಸುವರ್ಣ(37) ಮೃತ ಪಟ್ಟ ವ್ಯಕ್ತಿ.

ವಿವಾಹಿತರಾಗಿರುವ ನಿತಿನ್ ಅವರು ಇಂದು ಸಂಜೆ ಅಬ್ಬಕ್ಕ ವೃತ್ತದ ಬೀಚ್ ರಸ್ತೆ ಬದಿಯಲ್ಲಿದ್ದ ಮಾವಿನ ಮರ ಏರಿ‌ ಹಣ್ಣು ಕೀಳುತ್ತಿದ್ದರು. ಈ ವೇಳೆ ಆಯತಪ್ಪಿ ನಿತಿನ್‌ ಕೆಳಗೆ ಬಿದ್ದಿದ್ದು ತಲೆಗೆ ಕಲ್ಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇನ್ನು ಸ್ಥಳೀಯರು ತಕ್ಷಣ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ನಿತಿನ್ ಸಾವನ್ನಪ್ಪಿದ್ದರು‌ ಮೃತ ನಿತಿನ್ ಜಪ್ಪಿನ ಮೊಗರುವಿನ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!