March 19, 2026

ಬೆಳ್ತಂಗಡಿ: ತಾಲೂಕು ಪಂಚಾಯತ್ ಕ್ವಾಟ್ರಸ್‌ನಲ್ಲಿ ಆತ್ಮಹತ್ಯೆಗೆ ಶರಣಾದ ಬಾಲಕ

0
dead-4-1.jpg

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಪಂಚಾಯತ್ ಕ್ವಾಟ್ರಸ್ ನಲ್ಲಿ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಬೆಳ್ತಂಗಡಿ ತಾಲೂಕು ಪಂಚಾಯತ್ ನ ಪಕ್ಕದಲ್ಲಿರುವ ಸರಕಾರಿ ವಸತಿಗೃಹದಲ್ಲಿ ಬೆಳ್ತಂಗಡಿ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಮಂಜಳಾ ಅವರ ತಂಗಿ ಭಾಗ್ಯಮ್ಮ ಅವರ ಮಗ ಶಿವಪ್ರಸಾದ್ (15) ವಸತಿಗೃಹದ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಇನ್ನು ಮೃತ ಶಿವಪ್ರಸಾದ್ ಚಿತ್ರದುರ್ಗದಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಶಾಲೆಗೆ ರಜೆ ಇರುವುದರಿಂದ ದೊಡ್ಡಮ್ಮ ಮಂಜುಳಾ ಅವರ ಬೆಳ್ತಂಗಡಿ ವಸತಿಗೃಹಕ್ಕೆ ಬಂದಿದ್ದು ಘಟನೆ ವೇಳೆ ಮಂಜುಳಾ ಕೆಲಸಕ್ಕೆ ಹೋಗಿದ್ದು ,ಮಗಳು ಅಮೃತ ಕಾಲೇಜಿಗೆ ಹೋಗಿದ್ದಳು, ಮಗ ವಿರೇಂದ್ರ ಕೂಡ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಮಂಜುಳಾ ಕೆಲಸದಿಂದ ವಸತಿಗೃಹಕ್ಕೆ ಬಂದಾಗ ಬಾಲಕ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದ.

ಬೆಳ್ತಂಗಡಿ ಸಬ್ ಇನ್ಸೆಕ್ಟರ್ ಅರ್ಜುನ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!