March 19, 2026

ಉಜಿರೆ: ಒಡಿಶಾ ಮೂಲದ ಕಾರ್ಮಿಕ ನೇಣುಬಿಗಿದು ಆತ್ಮಹತ್ಯೆ

0
image_editor_output_image995834371-1682572047163.jpg

ಬೆಳ್ತಂಗಡಿ: ಒಡಿಶಾ ಮೂಲದ ಕಾರ್ಮಿಕನೋರ್ವ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಜಿರೆ ಗ್ರಾಮದ ಅಜಿತ ನಗರ ಎಂಬಲ್ಲಿ ನಡೆದಿದೆ.

ಒಡಿಶಾ ರಾಜ್ಯ ಕಂದಾವರಾ ಗೋಬಿಂದ ರಾವುತ್‌ ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ.

ಗೋಬಿಂದ ರಾವುತ್‌ ಉಜಿರೆ ಗ್ರಾಮದ ಫೈಬರ್‌ ವಸ್ತುಗಳಿಂದ ನಿರ್ಮಿಸುವ ಗೃಹೋಪಯೊಗಿ ವಸ್ತುಗಳ ನಿರ್ಮಾಣದ ಮಳಿಗೆಯಲ್ಲಿ ಹೆಲ್ಪರ್‌ ಕೆಲಸ ಮಾಡಿಕೊಂಡಿದ್ದ.

ಸ್ಥಳೀಯ ಅಜಿತ ನಗರ ಎಂಬಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಗೋಬಿಂದ ರಾವುತ್‌ ಎ. 25ರಂದು ರಾತ್ರಿ ಜಿಗುಪ್ಸೆಗೊಂಡು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!