February 2, 2026

ವಿಟ್ಲ: ಜನಪ್ರಿಯ ಫೌಂಡೇಷನ್ ಅಧ್ಯಕ್ಷ ಡಾ.ಅಬ್ದುಲ್ ಬಷೀರ್ ರವರ ಪುತ್ರ ಶಾಮಿಕ್ ಅಬ್ದುಲ್ಲಾಗೆ ಪಿಯುಸಿಯಲ್ಲಿ 98.16%

0
IMG-20230424-WA0002.jpg

ವಿಟ್ಲ: ವಿಟ್ಲದ ಕಂಬಳಬೆಟ್ಟು ಮೂಲದವರಾದ ಪ್ರಸ್ತುತ ಹಾಸನದಲ್ಲಿ ನೆಲೆಸಿರುವ ಜನಪ್ರಿಯ ಫೌಂಡೇಷನ್ ಅಧ್ಯಕ್ಷರಾಗಿರುವ ಡಾ.ಅಬ್ದುಲ್ ಬಷೀರ್ ರವರ ಪುತ್ರ ಶಾಮಿಕ್ ಅಬ್ದುಲ್ ರೆಹಮಾನ್ ರವರು ಪಿಯುಸಿಯಲ್ಲಿ ಶೇಕಡ 98.16 ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಮಂಗಳೂರಿನ ಎಕ್ಸಪರ್ಟ್ ಕಾಲೇಜಿನಲ್ಲಿ ವಿಜ್ಞಾನ ವಿಭಾದಲ್ಲಿ ಓದುತ್ತಿದ್ದ ಶಾಮಿಕ್ ರವರು ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಭಾಷಾ ವಿಷಯಗಳಲ್ಲಿ 190 ಅಂಕ ಪಡೆದರೆ, 4 ಪ್ರಮುಖ ವಿಷಯಗಳಲ್ಲಿ 400 ರಲ್ಲಿ 399 ಅಂಕ ಗಳಿಸುವ ಮೂಲಕ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಡಾ.ಅಬ್ದುಲ್ ಬಷೀರ್ ಹಾಗೂ ಶ್ರೀಮತಿ ಫಾತಿಮಾ ನಸ್ರೀನ್ ಬಷೀರ್ ರವರ ಮೂರನೇ ಮಗನಾಗಿರುವ ಶಾಮಿಕ್ ರವರು ಮುಂದೆ ವೈದ್ಯಕೀಯ ಶಿಕ್ಷಣ ಪಡೆಯುವ ಹಂಬಲ ವ್ಯಕ್ತಪಡಿಸಿದ್ದು ಸಿಇಟಿ, ನೀಟ್ ಪರೀಕ್ಷೆಗಳಿಗೆ ಸಿದ್ದತೆ ನಡೆಸುತ್ತಿದ್ದಾರೆ.

ಶಾಮಿಕ್ ರವರ ಅಣ್ಣಂದಿರಾದ ಶಾರುಖ್ ಮತ್ತು ಶಫಾಖ್ ವೈದ್ಯಕೀಯ ಉನ್ನತ ಶಿಕ್ಷಣ ಪಡೆಯುತ್ತಿದ್ದು ಮೂವರು ಸುಪುತ್ರರು ಕುಟುಂಬಕ್ಕೆ ಮತ್ತು ಊರಿಗೆ ತಂದೆಯಂತೆಯೇ ಹೆಸರನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!