September 20, 2024

ದ್ವಿತೀಯ ಪಿಯುಸಿ ಫಲಿತಾಂಶ: ಮರ್ಹೂಮ್ ಸಜೀಪ ಉಸ್ತಾದ್ ವುಮೆನ್ಸ್ ಶರೀಅತ್ ಹಾಗೂ ಪಿಯು ಕಾಲೇಜ್ ಗೆ 100 ಶೇ.ಫಲಿತಾಂಶ, 3 ಡಿಸ್ಟಿಂಕ್ಷನ್

0

ಸಜೀಪನಡು: ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಕೇಂದ್ರ ಜುಮಾ ಮಸೀದಿ ಸಜೀಪನಡು ಇದರ ಅಧೀನದಲ್ಲಿರುವ ಮರ್ಹೂಮ್ ಸಜೀಪ ಉಸ್ತಾದ್ ವುಮೆನ್ಸ್ ಶರೀಅತ್ ಹಾಗೂ ಪಿಯು ಕಾಲೇಜ್ ನ ದ್ವಿತೀಯ ಪ.ಪೂ ಪರೀಕ್ಷೆ ಯಲ್ಲಿ ವಾಣಿಜ್ಯ ವಿಭಾಗದಲ್ಲಿ,ಶೇ.100 ಫಲಿತಾಂಶ ದಾಖಲಿಸಿದೆ.ಮೂರು ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಪಡೆದಿದ್ದಾರೆ.

ಸುಹೈಲ ಆಲಂಪಾಡಿ 540(90 ಶೇ. ), ರಾಹಿನ ಸಜೀಪ 512(ಶೇ.85.33) ,ಹಾಗೂ ಇಶ್ರ ಬೇಗಂ ಸಜೀಪ 510( ಶೇ.85 ) ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!