February 2, 2026

ಧರ್ಮಸ್ಥಳಕ್ಕೆ ಆಗಮಿಸಿದ ಡಿ ಕೆ ಶಿವಕುಮಾರ್ ಕುಟುಂಬ: ಧಿಡೀರ್ ಹೆಲಿಕಾಪ್ಟರ್ ತಪಾಸಣೆ ನಡೆಸಿದ ಚುನಾವಣಾಧಿಕಾರಿಗಳು

0
IMG-20230422-WA0015.jpg

ಬೆಳ್ತಂಗಡಿಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಧರ್ಮಸ್ಥಳಕ್ಕೆ ಪ್ರವಾಸ ಕೈಗೊಂಡಿದ್ದು, ಹೆಲಿಪ್ಯಾಡ್ ನಲ್ಲಿ ಕುಟುಂಬ ಸಮೇತ ಬಂದಿಳಿದರು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅಧಿಕಾರಿಗಳು ರಾಜಕಾರಣಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಡಿ.ಕೆ.ಶಿವಕುಮಾರ್ ಅವರ ಹೆಲಿಕಾಪ್ಟರ್ ಅನ್ನು ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಇತ್ತೀಚೆಗೆ ಧರ್ಮಸ್ಥಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬಂದಿದ್ದಾಗಲೂ ಅವರ ಹೆಲಿಕಾಪ್ಟರ್ ಅನ್ನು ಪರಿಶೀಲನೆ ನಡೆಸಲಾಗಿತ್ತು.

‌ತಪಾಸಣೆಗೆ ಮುಂದಾದ ಚುನಾವಣಾಧಿಕಾರಿಗಳ ಜತೆ ಪೈಲೆಟ್ ಮಾತಿನ ಚಕಮಕಿ ನಡೆಸಿದ್ದು, ಇದು ಖಾಸಗಿ ಹೆಲಿಕಾಪ್ಟರ್, ಪರಿಶೀಲಿಸಲು ಅವಕಾಶವಿಲ್ಲವೆಂದರು ಹೇಳಿದರೂ , ಹೆಲಿಕಾಪ್ಟರ್ ನ್ನುಚುನಾವಣಾಧಿಕಾರಿಗಳು ತಪಾಸಣೆ ಮಾಡಿದರು. ಇದರೊಂದಿಗೆ ಡಿಕೆಶಿ ಅವರ ಬಟ್ಟೆ-ಬರೆಗಳಿದ್ದ ಸೂಟ್ ಕೇಸ್ ತಪಾಸಣೆ ಮಾಡಿದರು.

ಡಿಕೆಶಿ ಅವರ ಪತ್ನಿ ಉಷಾ, ಮಗ, ಪುತ್ರಿ, ಅಳಿಯ ಇವರು ಪ್ರತ್ಯೇಕ ಹೆಲಿಕಾಪ್ಟರ್​​ನಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದರು.

Leave a Reply

Your email address will not be published. Required fields are marked *

error: Content is protected !!