ಪಾಟ್ರಕೋಡಿ ಜುಮ್ಮಾ ಮಸೀದಿಯಲ್ಲಿ ಸಂಭ್ರಮದಿಂದ ಈದ್ ಆಚರಣೆ
ಕೆದಿಲ: ಪಾಟ್ರಕೋಡಿ ಜುಮ್ಮಾ ಮಸೀದಿಯಲ್ಲಿ ಸಂಭ್ರಮದಿಂದ ರಂಜಾನ್ ಈದ್ ಹಬ್ಬವನ್ನು ಆಚರಿಸಲಾಯಿತು.
ಜುಮ್ಮಾ ಮಸೀದಿಯ ಖತೀಬರಾದ ಖಲಂದರ್ ಶಾಫಿ ಬಾಖವಿ ಅಲ್ ಮನಾನಿ ರವರ ನೇತೃತ್ವದಲ್ಲಿ ಈದ್ ನಮಾಜ್ ನಿರ್ವಹಿಸಲಾಯಿತು.
ದ್ವೇಷ ಅಸೂಯೆನು ತ್ಯಜಿಸಿ ಇಸ್ಲಾಂ ಧರ್ಮದ ನೀತಿ ನಿಯಮಗಳ ಮೂಲಕ ಜೀವಿಸುವುದು ಮಾತ್ರವಲ್ಲದೇ ಅನ್ಯ ಧರ್ಮೀಯರ ಜೊತೆಯಲ್ಲಿ ಇಸ್ಲಾಂ ಚೌಕಟ್ಟಿನಲ್ಲಿ ಸಹೊದರತೆ ಸಹಕಾರ ಸಾಮರಸ್ಯದೊಂದಿಗೆ ಇರುವಂತೆ ಜುಮ್ಮಾ ಮಸೀದಿಯ ಖತೀಬರು ಈದ್ ಸಂದೇಶ ನೀಡಿದರು. ನಂತರ ನಡೆದ ಸಾಮೂಹಿಕ ದುವಾ ಪ್ರಾಥನೆಗೈಲಾಯಿತು.




