September 3, 2026

ಮಂಗಳೂರು: ಕಾಂಗ್ರೆಸ್ ಮುಖಂಡ, ಉದ್ಯಮಿಯ ಮನೆ, ಕಚೇರಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ

0
image_editor_output_image-1695639322-1681602172491.jpg

ಮಂಗಳೂರು: ಕಾಂಗ್ರೆಸ್ ಮುಖಂಡ, ಉದ್ಯಮಿ ವಿವೇಕ್ ರಾಜ್ ಪೂಜಾರಿ ಅವರ ನಗರದ ಮನೆ ಮತ್ತು ಕಚೇರಿಗೆ ಶನಿವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರು ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಆಗಿರುವ ವಿವೇಕ್ ರಾಜ್, ಅವರ ಮನೆಗೆ 2 ಕಾರಿನಲ್ಲಿ ಬಂದಿರುವ 8 ಮಂದಿ ಅಧಿಕಾರಿಗಳ ತಂಡ ವಿವೇಕ್ ರಾಜ್ ಅವರ ನಿವಾಸ ಹಾಗೂ ಕಚೇರಿಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿವೇಕ್ ರಾಜ್ ಪೂಜಾರಿ ಅವರು, “ಚಿಕ್ಕಮಗಳೂರಿನ ಚುನಾವಣಾ ಉಸ್ತುವಾರಿ ಹಿನ್ನಲೆ ನನ್ನ ಮನೆಗೆ ಐಟಿ ದಾಳಿ ನಡೆಸಲಾಗಿದೆ. ನನ್ನ ವ್ಯವಹಾರದ ದಾಖಲೆಪತ್ರಗಳು ಸಮರ್ಪಕವಾಗಿದ್ದು ತೆರಿಗೆ ವಂಚಿಸಿ ವ್ಯವಹರಿಸುವುದಿಲ್ಲ. ದುರುದ್ದೇಶಪೂರಿತವಾಗಿ ನನ್ನ ಮನೆಗೆ ಐಟಿ ದಾಳಿ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!