February 3, 2026

ಬಿಜೆಪಿ ಅಭ್ಯರ್ಥಿ ಶಾಸಕ‌ ರಾಜೇಶ್ ನಾಯ್ಕ್ ನಾಮಪತ್ರ ಸಲ್ಲಿಕೆ: ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿ: ರಾಜೇಶ್ ನಾಯ್ಕ್ ಅವರ ಗೆಲುವಿನ ಹೆಬ್ಬಾಗಿಲು ತೆರದು ಬಿಟ್ಟಿದೆ ಎಂದ ಕೋಟ ಶ್ರೀನಿವಾಸ ಫೂಜಾರಿ

0
IMG-20230415-WA0038.jpg

ಬಂಟ್ವಾಳ: ಸಹಸ್ರ ಸಹಸ್ರ ಬಿಜೆಪಿ ಕಾರ್ಯಕರ್ತರೇ ಕೇಳಿ, ಪೊಳಲಿ ರಾಜರಾಜೇಶ್ವರಿ ದೇವಳದಿಂದ ಬಂದಾಗಲೇ ಅರ್ಥ ಆಗಿ ಬಿಟ್ಟಿದೆ, ಬಿಜೆಪಿ ಪಕ್ಷದ ಅಭ್ಯರ್ಥಿ ಶಾಸಕ ರಾಜೇಶ್ ನಾಯ್ಕ್ ಅವರ ಗೆಲುವಿನ ಹೆಬ್ಬಾಗಿಲು ತೆರದು ಬಿಟ್ಟಿದೆ ಎಂದು ಸಚಿವ ಕೋಟ ಶ್ರೀನಿವಾಸ ಫೂಜಾರಿ ಹೇಳಿದರು.

ಬಂಟ್ವಾಳ ಬಿಜೆಪಿ ಅಭ್ಯರ್ಥಿ ಶಾಸಕ‌ ರಾಜೇಶ್ ನಾಯ್ಕ್ ಅವರ ನಾಮಪತ್ರ ಸಲ್ಲಿಕೆಯ ವೇಳೆ ಸೇರಿದ ಅಪಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು,
‌‌‌ಕಾರ್ಯಕರ್ತರಲ್ಲಿ ವಿನಂತಿ ಮಾಡುತ್ತೇನೆ ಮುಂದಿನ ದಿನಗಳಲ್ಲಿ ಮನೆಮನೆಗೆ ಬೇಟಿ ನೀಡಿ ಬಿಜೆಪಿ ಗೆ ಮತಯಾಚಿಸಿ ಎಂದರು.

ಸಮರ್ಥ, ಸಮೃದ್ಧ ಭಾರತ,ಸ್ವಾಭಿಮಾನದ ಭಾರತ ನಿರ್ಮಾಣಕ್ಕಾಗಿ, ಪ್ರಧಾನಿ ನರೇಂದ್ರ ಮೋದಿಯವರ ಯಾವ ಶ್ರಮ, ಸಾರ್ಥಕ ತೆ ಇದೆ ಅವರ ಬದುಕಿನ ಸಮರ್ಪಣೆಯ ಹೋರಾಟಕ್ಕೆ ಬಂಟ್ವಾಳ ದಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ರಾಜೇಶ್ ನಾಯ್ಕ್ ಅವರನ್ನು ಗೆಲ್ಲಿಸುವುದರ ಮೂಲಕ ನಮ್ಮ ಕೈಯನ್ನು ರಾಷ್ಟಕೋಸ್ಕರ ಜೋಡಿಸೋಣ ಎಂದು ಅವರು ವಿನಂತಿ ಮಾಡಿದರು.

ಬಂಟ್ವಾಳ ಕ್ಷೇತ್ರದ ಜನ ನೆಮ್ಮದಿಯಿಂದ ಬದುಕು ಕಟ್ಟಿಕೊಂಡು ಇರಲು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಾರಣ ಎಂದರು. ಜಾತಿ ಧರ್ಮ ವನ್ನು ಮೀರಿ ನೆಮ್ಮದಿಯಿಂದ ಬದುಕುತ್ತಿದ್ದಾರೆ.
ಈ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಗೋಲಿಬಾರ್ ನಡೆದಿಲ್ಲ, 144 ಸೆಕ್ಷನ್ ಜಾರಿ ಆಗಿಲ್ಲ, ಶಾಂತಿಭಂಗ ಆಗಿಲ್ಲ, ರಿಸರ್ವ್ ಪೋಲೀಸ್ ನಿಂತಿಲ್ಲ, ಇಡೀ ಬಂಟ್ವಾಳ ದ ಜನ ನೆಮ್ಮದಿಯಿಂದ ಇರಬೇಕಾದರೆ ಶಾಸಕ ರಾಜೇಶ್ ನಾಯ್ಕ್ ಅವರು ಕಾರಣ, ಆ ಕಾರಣಕ್ಕಾಗಿ ಮತ್ತೊಮ್ಮೆ ರಾಜೇಶ್ ನಾಯ್ಕ್ ಅವರನ್ನು ಆರಿಸುವುದು ಕ್ಷೇತ್ರದ ಪ್ರತಿಯೊಬ್ಬ ಮತದಾರರ ಕರ್ತವ್ಯ, ಈ ಕ್ಷೇತ್ರ ಮತ್ತೊಮ್ಮೆ ಬಂಗಾರದ ಕ್ಷೇತ್ರ ವಾಗಿ ಇರಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದರು.

ರಾಜ್ಯದ 224 ಕ್ಷೇತ್ರದಲ್ಲಿ ಗಮನಿಸಿ, 5 ವರ್ಷಗಳ ವಿವಾದ ಇಲ್ಲ, ಜಾತಿ ಸಂಘರ್ಷವಿಲ್ಲ, ಧರ್ಮ ಸಂಘರ್ಷ ಇಲ್ಲ, ಶಾಂತಿಯ ನೆಲೆವೀಡು ಆಗಿದೆ ಸಮಾನತೆಯಿಂದ ನೆಮ್ಮದಿಯ ಬದುಕನ್ನು ಸಾಗಿಸಲು ಸಾಧ್ಯವಾಗಿದ್ದು ಬಿಜೆಪಿಯ ಆಡಳಿತ ದಿಂದ ಮಾತ್ರ ಸಾಧ್ಯವಾಯಿತು.

ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗೆಲು ನಿಶ್ಚಿತ ಆದರೆ ಕಾಂಗ್ರೆಸ್ ಅಪಪ್ರಚಾರದಲ್ಲಿ ಮುಳುಗಿದ್ದು,ಬಿಜೆಪಿ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ತಿಳಿಸಿದರು.

ಕಾಂಗ್ರೇಸ್ ಮನೆಮನೆಗೆ ಬಂದು ಕೊಡುತ್ತಿರುವ ಗ್ಯಾರಂಟಿ ಕಾರ್ಡ್ ಗೆ ವಾರೆಂಟಿ ಇಲ್ಲ ಎಂದು ವ್ಯಂಗ್ಯ ವಾಡಿದ ಅವರು ಈ ವಿಚಾರವನ್ನು ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತಿಳಿಸುವ ಕೆಲಸ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದ ಜನತೆಗೆ ನೂರಾರು ಯೋಜನೆ ನೀಡಿದ್ದಲ್ಲದೆ, ಅರ್ಜಿ ಹಾಕದೆ ಕಿಸಾನ್ ಸಮ್ಮಾನ್ ಯೋಜನೆ, ಸಂಧ್ಯಾಸುರಕ್ಷಾ ಯೋಜನೆ , ಶಿಕ್ಷಣ ,ಆರೋಗ್ಯ ನೀಡಿದ್ದಲ್ಲದೇ ಬಡವರ ಮನೆಯ ಹೆಣ್ಣುಮಕ್ಕಳನ್ನು ಭಾಗ್ಯಲಕ್ಮೀ ಮಾಡಿದ ಸರಕಾರ ಬಿಜೆಪಿ ಎಂದು ಹೇಳಿದರು.

ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ನಾಮಪತ್ರ ಸಲ್ಲಿಕೆಯ ವೇಳೆ ಪೊಳಲಿಯಿಂದ ನನ್ನ ಜೊತೆ ಹೆಜ್ಜೆ ಗೆ ಹೆಜ್ಜೆ ಹಾಕಿ ಕಾಲ್ನಡಿಗೆಯಲ್ಲಿ ಬಂದು ಶಕ್ತಿ ನೀಡಿದ
ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ನೀಡುತ್ತೇನೆ ಎಂದರು.
ಕಳೆದ ಹತ್ತು ವರ್ಷಗಳಲ್ಲಿ ನನ್ನ ಪ್ರತಿ ಹೆಜ್ಜೆಯಲ್ಲಿಯೂ ಪ್ರೀತಿ ವಿಶ್ವಾಸ ,ನಂಬಿಕೆ, ಸಹಕಾರ ನೀಡಿ, ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ ಕ್ಷೇತ್ರದ ಜನತೆಗೆ ನಾನು ಚಿರ ಋಣಿಯಾಗಿದ್ದೇನೆ.
ಪಕ್ಷ ಮತ್ತೊಮ್ಮೆ ಅವಕಾಶ ನೀಡಿದ್ದು, ಕ್ಷೇತ್ರದ ಜನತೆಯ ನಂಬಿಕೆ ವಿಶ್ವಾಸದ ಮೇಲೆ ನಾಮಪತ್ರ ಸಲ್ಲಿಸುತ್ತಿದ್ದು, ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಅವರು ‌ಮನವಿ ಮಾಡಿದರು.

ಶಾಸಕ ರಾಜೇಶ್ ನಾಯ್ಕ್ ಅವರು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಸಿ ಬಳಿಕ ಸಾವಿರಾರು ಕಾರ್ಯಕರ್ತರ ಜೊತೆಗೆ ಕಾಲ್ನಡಿಗೆಯಲ್ಲಿ ಬಿಸಿರೋಡಿಗೆ ಬಂದು ಆಡಳಿತ ಸೌಧದಲ್ಲಿ ನಾಮಪತ್ರ ಸಲ್ಲಿಸಿದರು.

ಕಾಲ್ನಡಿಗೆಯಲ್ಲಿ ಆಗಮಿಸುವ ವೇಳೆ ಕಾರ್ಯಕರ್ತರು ಶಾಸಕ ರಾಜೇಶ್ ನಾಯ್ಕ್ ಅವರನ್ನು ಮೇಲಕ್ಕೆತ್ತಿ ಸಂಭ್ರಮಿಸಿದರು. ಪ್ಲೈಓವರ್ ನ ಮೇಲಿನಿಂದ ಪುಷ್ಪಾರ್ಚನೆ ಮಾಡಿದರು,ಕಾಲ್ನಡಿಗೆಯ ಉದ್ದಕ್ಕೂ ತಾಯಂದಿರು ಆರತಿ ಕುಂಕುಮ ಹಚ್ಚಿ ಹರಸಿ ಹಾರೈಸಿದರು.
ದ.ಕ.ಜಿಲ್ಲೆಯ ರಾಷ್ಟ್ರೀಯ ಪಕ್ಷದ ಪ್ರಥಮ‌ಅಭ್ಯರ್ಥಿಯಾಗಿ ಬಂಟ್ವಾಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎ. 15 ರಂದು ಶನಿವಾರ ಮಧ್ಯಾಹ್ನ 1.15 ಗಂಟೆ ಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಂ.ಎಲ್‌ಸಿ.ಪ್ರತಾಪ್ ಸಿಂಹ ನಾಯಕ್, ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರುಗಳಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಮುಂಬಾಯಿ ಕಾರ್ಪೋರೇಟರ್ ಸಂತೋಷ್ ಶೆಟ್ಟಿ ದಳಂದಿಲ, ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಜ್ಯ ಒಳಚರಂಡಿ ಮತ್ತು ನಗರ ನೀರು ಸರಬರಾಜು ಮಂಡಳಿ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ದೇವಪ್ಪ ಪೂಜಾರಿ ಪ್ರಮುಖರಾದ ಕಸ್ತೂರಿ ಪಂಜ, ಸುಚರಿತ ಶೆಟ್ಟಿ, ಕೊರಗಪ್ಪ ನಾಯ್ಕ್, ಶರಣ್ ಪಂಪ್ ವೆಲ್ , ರಾಮ್ ದಾಸ್ ಬಂಟ್ವಾಳ ,ಡೊಂಬಯ್ಯ ಅರಳ,ರವೀಶ್ ಶೆಟ್ಟಿ ಕರ್ಕಳ, ಗೋವಿಂದ ಪ್ರಭು, ದಿನೇಶ್ ಭಂಡಾರಿ, ಉದಯರಾವ್, ಸುದರ್ಶನ ಬಜ, ಪ್ರಭಾಕರ ಪ್ರಭು, ವಿವೇಕ್ ಶೆಟ್ಟಿ ನಗ್ರಿಗುತ್ತು, ಶ್ರೀಕಾಂತ್ ಶೆಟ್ಟಿ, ನಳಿನಿ ಶೆಟ್ಟಿ, ಮಾದವ ಮಾವೆ, ಪುಷ್ಪರಾಜ್ ಚೌಟ, ಕಿಶೋರ್ ಪಲ್ಲಿಪಾಡಿ, ಶ್ರೀಧರ್ ಶೆಟ್ಟಿ ಪುಳಿಂಚ, ಕಮಲಾಕ್ಷಿ ಕೆ.ಪೂಜಾರಿ, ರವೀಂದ್ರ ಕಂಬಳಿ, ವಿಲಾಸ್ ನಾಯಕ್, ಪ್ರಕಾಶ್ ಅಂಚನ್, ಚನ್ನಪ್ಪ ಕೋಟ್ಯಾನ್, ಕೃಷ್ಣಪ್ಪ ಪೂಜಾರಿ, ರಮನಾಥ ರಾಯಿ,ದಿನೇಶ್ ಅಮ್ಟೂರು, ಮೋನಪ್ಪ ದೇವಶ್ಯ,ವಜ್ರನಾಥ ಕಲ್ಲಡ್ಕ, ಭುವನೇಶ್ ಪಚ್ಚಿನಡ್ಕ, ಪ್ರದೀಪ್ ಅಜ್ಜಿಬೆಟ್ಡು,ದಿನೇಶ್ ದಂಬೆದಾರ್, ಸತೀಶ್ ಪೂಜಾರಿ ಆಳಕೆ, ಯಶೋಧರ ಕರ್ಬೆಟ್ಟು,ಸಂದೇಶ್ ಶೆಟ್ಟಿ, ಸಂದೀಪ್ ಶೆಟ್ಟಿ, ಸುಪ್ರೀತ್ ಆಳ್ಚ, ಗಣೇಶ್ ರೈ ಮಾಣಿ, ಸುರೇಶ್ ಕೋಟ್ಯಾನ್, ಭಾರತಿ ಚೌಟ, ಸೀಮಾಮಾದವ, ಹರ್ಷಿಣಿ ಪುಷ್ಪಾನಂದ, ಶರ್ಮಿತ್ ಜೈನ್ ವೆಂಕಟೇಶ್ ನಾವುಡ, ಯಶವಂತ ಪೊಳಲಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!