February 3, 2026

ಉಡುಪಿ: ಬಿಟ್ ಕಾಯಿನ್ ಇನ್ವೆಸ್ಟ್: 25.52 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ
 

0
bitcoin-16411059744x3.png

ಉಡುಪಿ: ಬಿಟ್ ಕಾಯಿನ್ ಇನ್ವೆಸ್ಟ್ ಮಾಡಿದ ವ್ಯಕ್ತಿಯೋರ್ವ 25.52 ಲಕ್ಷ ರೂ. ಕಳೆದುಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ತುಷಾರ್ ಕಪೂರ್ ಎಂಬಾತ ಉಡುಪಿಯ ವ್ಯಕ್ತಿಯೋರ್ವರಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡು ಬಿಟ್ ಕಾಯಿನ್ ನಲ್ಲಿ ಇನ್‌‌ವೆಸ್ಟ್‌‌ಮೆಂಟ್ ಮಾಡುವಂತೆ ಸೂಚಿಸಿದ್ದ. ಅಲ್ಲದೆ, ಇನ್ವೆಸ್ಟ್ ಮೆಂಟ್ ಮಾಡಿದ್ದಲ್ಲಿ ಅತ್ಯಧಿಕ ಲಾಭ ಇದೆ ಎಂದು ನಂಬಿಸಿದ್ದ. ಅಲ್ಲದೆ ಖದೀಮ ಉಡುಪಿಯ ವ್ಯಕ್ತಿಯಿಂದ Binance ಹಾಗೂ Noones.com ನಲ್ಲಿ ವ್ಯಾಲೆಟ್ ಓಪನ್ ಮಾಡಿಸಿದ್ದ. ಆ ಮೂಲಕ ಹಣ ಪಾವತಿಸುವಂತೆ ಸೂಚಿಸಿದ್ದಾನೆ.

ಇದನ್ನು ನಂಬಿದ ಅಮಾಯಕ ವ್ಯಕ್ತಿ ಆರೋಪಿ ಸೂಚಿಸಿದ ಖಾತೆಗೆ ಹಂತ ಹಂತವಾಗಿ ಒಟ್ಟು 25,52,300/- ರೂ. ಹಣ ಪಾವತಿ ಮಾಡಿದ್ದರು. ಆ ಬಳಿಕ ಪಿರ್ಯಾದಿದಾರರ ವ್ಯಾಲೇಟ್ ನಲ್ಲಿದ್ದ ಬಿಟ್ ಕಾಯಿನ್ ನ್ನು ಆರೋಪಿಯು ಟ್ರಾನ್ಸ್‌‌ಫರ್ ಮಾಡಿ, ಬಿಟ್ ಕಾಯಿನ್ ನೀಡದೇ ಪಡೆದ ಹಣ ವಾಪಾಸು ನೀಡದೇ ಮೋಸ ಮಾಡಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!