ಕಾಲೇಜಿಗೆ ತೆರಳಿದ್ದ ಅವಳಿ ವಿದ್ಯಾರ್ಥಿಗಳು ನಾಪತ್ತೆ
ಗಾಂಧೀನಗರ: ಕಳೆದ 2 ತಿಂಗಳಿಂದ ನನ್ನ ಅವಳಿ ಮಕ್ಕಳು ಕಾಣೆಯಾಗಿದ್ದಾರೆಂದು ಗುಜರಾತ್ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ವ್ಯಕ್ತಿಯೊಬ್ಬ ಪತ್ರ ಬರೆದಿರುವ ಘಟನೆ ನಡೆದಿದೆ.
ವಡೋದರ (Vadodara) ನಿವಾಸಿ ಚಿಮನ್ ಎಂಬಾತನ ಮಕ್ಕಳಾದ ಪದವಿ ಓದುತ್ತಿರುವ ಶೀತಲಾ ಹಾಗೂ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿರುವ ಸರಿಕಾ ಕಾಣೆಯಾಗಿರುವ ಅವಳಿ ಸಹೋದರಿಯರು.
ಎಂದಿನಂತೆ ಕಾಲೇಜಿಗೆ ಹೋಗಿದ್ದ ಇಬ್ಬರು ಸಹೋದರಿಯರು ಫೆ.17 ರಿಂದ ನಾಪತ್ತೆಯಾಗಿದ್ದಾರೆ. ಮಕ್ಕಳಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದ ತಂದೆ ಕೊನೆಗೆ ಸಯಾಜಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.




