ಸೌದಿಅರೇಬಿಯಾದಲ್ಲಿ ಭೀಕರ ಕಾರು ಅಪಘಾತ: ಗಂಭೀರ ಗಾಯಗೊಂಡಿದ್ದ ಕಾಪು ಮೂಲದ ಯುವಕ ಮೃತ್ಯು

ಸೌದಿ ಅರೇಬಿಯಾ; ಕಾರು ಅಪಘಾತದಲ್ಲಿ ಗಾಯಗೊಂಡು ಗಂಭೀರವಸ್ಥೆಯಲ್ಲಿದ್ದ ಉಡುಪಿ ಕಾಪು ನಿವಾಸಿ ಯುವಕ ಜುಬೈಲ್ ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೆಸಿಎಫ್ ಅಬುಹಾದ್ರಿಯ ಸೆಕ್ಟರ್, ಜುಬೈಲ್ ಇದರ ಈಸ್ಟ್ ಯುನಿಟ್ ನ ಪಬ್ಲಿಕೇಶನ್ ವಿಂಗ್ ನ ಕಾರ್ಯದರ್ಶಿ ಕೂಡ ಆಗಿದ್ದ ರಿಯಾಜ್ ಕಾಪು ಮೃತರು.
ರಿಯಾಝ್ ಅವರಿಗೆ ಮಾ.25ಕ್ಕೆ ಜುಬೈಲ್ ನಲ್ಲಿ ಅಪಘಾತವಾಗಿತ್ತು.ಗಂಭೀರವಾಗಿದ್ದ ಅವರ ಮೆದುಳು ನಿಷ್ಕ್ರಿಯಗೊಂಡಿದ್ದು, ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು.ಇಂದು ವೆಂಟಿಲೇಟರ್ ನಿಂದ ತೆಗೆದಾಗ ಚೇತರಿಕೆ ಕಾಣದೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸದ್ದಾರೆ.
ರಿಯಾಝ್ ಅವರಿಗೆ ಮೂರು ವರ್ಷಗಳ ಮೊದಲು ವಿವಾಹವಾಗಿತ್ತು.ಮೃತದೇಹದ ಅಂತ್ಯಸಂಸ್ಕಾರ ಸೌಧಿಯಲ್ಲೇ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ರಿಯಾಝ್ ನಿಧನದಿಂದ ಕುಟುಂಬಸ್ಥರ ರೋಧನ ಮುಗಿಲುಮುಟ್ಟಿದೆ.
