ಎ.9:”ಕರಾವಳಿ ಸುದ್ದಿ” ವಾರ ಪತ್ರಿಕೆಯ ನೂತನ ಕಚೇರಿಯ ಉದ್ಘಾಟನೆ
ಬಂಟ್ವಾಳ: ಬಂಟ್ವಾಳ ತಾಲೂಕನ್ನು ಕೇಂದ್ರವಾಗಿರಿಸಿಕೊಂಡು ಜಿಲ್ಲಾ ಮಟ್ಟದಲ್ಲಿ ಪ್ರಸಾರಗೊಳ್ಳಲಿರುವ ನೂತನ ವಾರ ಪತ್ರಿಕೆ ‘ಕರಾವಳಿ ಸುದ್ದಿ’ ಇದರ ನೂತನ ಕಛೇರಿಯ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮ ಎ.9 ರಂದು ಬಂಟ್ವಾಳ ಮಾಣಿ ನಿತ್ಯಾದಾರ್ ಮ್ಯಾನ್ಶನ್ ಹತ್ತಿರ ನೆರವೇರಲಿದೆ.
ಸೂರಿಕುಮೇರು ಚರ್ಚ್ ಧರ್ಮಗುರು ವಂ|ಗ್ರೆಗರಿ ಪಿರೇರಾರವರು ಆಶೀರ್ವಚನ ನೀಡಲಿದ್ದಾರೆ. ಸೂರಿಕುಮೇರು ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್ ರವರು ನೂತನ ಕಛೇರಿಯನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಮಾಣಿಗುತ್ತು ಸಚಿನ್ ರೈ, ದ.ಕ. ಮುಸ್ಲಿಂ ಸೆಂಟ್ರಲ್ ಸಮಿತಿಯ ಸದಸ್ಯ ಹನೀಫ್ ಖಾನ್ ಕೊಡಾಜೆ, ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ನಿಕಟಪೂರ್ವ ಕೇಂದ್ರೀಯ ಅಧ್ಯಕ್ಷರಾದ ಪಾವ್ಲ್ ರೊಲ್ಫಿ ಡಿ’ಕೋಸ್ಟರವರು ಭಾಗವಹಿಸಲಿದ್ದಾರೆ ಎಂದು ಕರಾವಳಿ ಸುದ್ದಿಯ ಸಂಪಾದಕ ಹಾಗೂ ಪ್ರಕಾಶಕ ರೋಷನ್ ಬೊನಿಫಾಸ್ ಮಾರ್ಟಿಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




