June 27, 2026

ಕುಂದಾಪುರ: ಕೊಸಳ್ಳಿ ಫಾಲ್ಸ್ ನಲ್ಲಿ ಸ್ನಾನಕ್ಕಿಳಿದು ನೀರುಪಾಲಾದ ಕಾಲೇಜು ವಿದ್ಯಾರ್ಥಿಯ ಮೃತದೇಹ ಪತ್ತೆ

0
image_editor_output_image-1202908530-1680934103433.jpg

ಕುಂದಾಪುರ: ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಕೊಸಳ್ಳಿ ಫಾಲ್ಸ್ ನಲ್ಲಿ ಸ್ನಾನಕ್ಕಿಳಿದ ವೇಳೆ ನೀರುಪಾಲಾದ ಕಾಲೇಜು ವಿದ್ಯಾರ್ಥಿಯ ಮೃತದೇಹ ಶನಿವಾರ ಬೆಳಗ್ಗೆ ಪತ್ತೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎ.ಎಸ್.ಐ ಕುಮಾರ ಶೆಟ್ಟಿ ಎಂಬವರ ಪುತ್ರ ಚಿರಾಂತ್ ಶೆಟ್ಟಿ(20) ನೀರುಪಾಲಾಗಿ ಮೃತಪಟ್ಟ ಯುವಕ.

ಗೆಳೆಯರೊಂದಿಗೆ ಶುಕ್ರವಾರ ಸಂಜೆ ಕೊಸಳ್ಳಿ ಫಾಲ್ಸ್ ಗೆ ಬಂದಿದ್ದ ಇವರು ನೀರಿಗಿಳಿದ ವೇಳೆ ಮುಳುಗಿ ನಾಪತ್ತೆಯಾಗಿದ್ದರು. ತೀವ್ರ ಹುಡುಕಾಟದ ಬಳಿಕ ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.

Leave a Reply

Your email address will not be published. Required fields are marked *

error: Content is protected !!