December 16, 2025

ಪುತ್ತೂರು: ಮಹಿಳೆಯೊಬ್ಬರ ಜತೆ ಪ್ರತಿಷ್ಟಿತ ಜನಪ್ರತಿನಿಧಿ ರೊಮ್ಯಾನ್ಸ್ ಫೋಟೋ ವೈರಲ್: ಚುನಾವಣೆ ಮೇಲೆ ದೊಡ್ಡ ಮಟ್ಟದಲ್ಲಿ ಹೊಡೆತ ಬೀಳಲು ಸಾಕ್ಷಿಯಾದ ಫೋಟೋ

0
image_editor_output_image-1989715772-1680761617034

ಉಪ್ಪಿನಂಗಡಿ : ಮಹಿಳೆಯೊಬ್ಬರು ಪ್ರತಿಷ್ಟಿತ ರಾಜಕಾರಣಿ ಹಾಗೂ ಜನ ಪ್ರತಿನಿಧಿನಿಯ ಜತೆಗೆ ಆತ್ಮೀಯವಾಗಿರುವ ಪೋಟೊವೊಂದು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು. ಈ ಕುರಿತು ಸಂತ್ರಸ್ತ ಮಹಿಳೆಯು ನ್ಯಾಯ ಯಾಚಿಸಿ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಈ ಹಿಂದೆ ರಾಜಕೀಯದಲ್ಲಿ ಸಕ್ರಿಯವಾಗಿದ್ದ ನೆಕ್ಕಿಲಾಡಿ ಸಮೀಪದ ಮಹಿಳೆ ದೂರುದಾರೆ. ಈಕೆ ಎ.5 ರಂದು ಸಂಜೆ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ. ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಪೋಟೊ ಅಸಲಿ/ ಎಡಿಟೆಡ್‌ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸ್‌ ತನಿಖೆ ನಡೆಯಲಿದೆ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಫೋಟೊಗಳು ರಾಜಕೀಯ ವಲಯದಲ್ಲೂ ತಲ್ಲಣ ಮೂಡಿಸಿದೆ. ಮುಂಬರುವ ವಿಧಾನ ಸಭಾ ಚುನಾವಣೆಯ ಮೇಲೆ ಈ ಫೋಟೊಗಳು ಪರಿಣಾಮ ಬೀರುವ ಸಾಧ್ಯತೆಯಿದೆಯೆಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಸಂಬಂಧಪಟ್ಟ ಪಕ್ಷದ ಪ್ರಮುಖ ನಾಯಕರು ಈ ಗೊಂದಲಕಾರಿ ಸನ್ನಿವೇಶವನ್ನು ಎದುರಿಸುವ ಕುರಿತು ಹಲವು ಗುಪ್ತ ಸಭೆಗಳನ್ನು ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!