December 16, 2025

ಸಿಎಂ ಬೊಮ್ಮಾಯಿಗೆ ಬೆಂಬಲ ಘೋಷಿಸಿದ ನಟ ಕಿಚ್ಚ ಸುದೀಪ್‌

0
ms-050423-sude.jpg

ಬೆಂಗಳೂರು: ನನ್ನ ಚಲನಚಿತ್ರದ ಕಷ್ಟದ ದಿನಗಳಲ್ಲಿ ನನಗೆ ಬೆನ್ನೆಲುಬಾಗಿ ನಿಂತವರು ಮಾಮ ಎಂದೇ ಕರೆಯುವಂತ ಬಸವರಾಜ ಬೊಮ್ಮಾಯಿ ಅವರು ಹೀಗಾಗಿ ಅವರು ಮತ್ತು ನನ್ನ ಸ್ನೇಹಿತರ ಪರವಾಗಿ ನಿಲ್ಲುತ್ತೇನೆ ಎಂದು ನಗರದ ಅಶೋಕ ಹೊಟೇಲ್ ನಲ್ಲಿ ಇಂದು ಜಂಟಿ ಸುದ್ದಿಗೋಷ್ಠಿ ನಟ ಕಿಚ್ಚ ಸುದೀಪ್‌ ಹೇಳಿದ್ದಾರೆ.

ನಾನು ಚಿತ್ರರಂಗಕ್ಕೆ ಎಂಟ್ರಿಕೊಟ್ಟಾಗ ನನ್ನ ಕಷ್ಟದಲ್ಲಿ ಸಿಎಂ ಬೊಮ್ಮಾಯಿ ಜತೆಗಿದ್ದರು. ಅವರನ್ನು ಚಿಕ್ಕದಿನಿಂದಲೂ ನೋಡಿದ್ದೇನೆ. ಹೀಗಾಗಿ, ನಾನು ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.

ನನಗೆ ಯಾರೂ ಗಾಡ್‌ ಫಾದರ್‌ ಇರಲಿಲ್ಲ. ಇಲ್ಲಿ ನಿಲುವು, ರಾಜಕೀಯ ಎಂದು ಬರುವುದಿಲ್ಲ. ನಾನು ಯಾವುದೇ ಪಕ್ಷದ ಪರ ನಿಂತಿಲ್ಲ ಎಂದು ಸುದೀಪ್‌ ತಿಳಿಸಿದ್ದಾರೆ.

ಆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ನಟ ಸುದೀಪ್ ಅವರೊಂದಿಗೆ ನಾನು ಈ ಹಿಂದೆಯೇ ಚರ್ಚಿಸಿದ್ದೆ. ನಿಮಗಾಗಿ ಪ್ರಚಾರ ಮಾಡುತ್ತೇನೆಂದು ಮಾತು ಕೊಟ್ಟಿದ್ದಾರೆ. ಅವರು ಯಾವುದೇ ಪಕ್ಷಕ್ಕೆ ಸೇರಿದವರು ಅಲ್ಲ. ನಮ್ಮ ಪಕ್ಷಕ್ಕೆ ಸೇರಿಕೊಳ್ಳದೇ ಇದ್ದರೂ ಬಿಜೆಪಿ ಪರ ಸುದೀಪ್ ಪ್ರಚಾರ ಮಾಡಲಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, ನಾನು ಪಕ್ಷವನ್ನು ಬೆಂಬಲಿಸುತ್ತೇನೆ, ಪ್ರಚಾರವೂ ಮಾಡುತ್ತೇನೆ. ಆದರೆ ಎಲ್ಲಾ ಕಡೆ ಹೋಗಲು ನನಗೂ ಕಷ್ಟ. ನನ್ನ ಜೀವನದಲ್ಲಿ ಪಕ್ಷ ಬರುವುದಿಲ್ಲ. ಬೊಮ್ಮಾಯಿ ಅವರನ್ನು ನೋಡಿ ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!