ಬಂಟ್ವಾಳ: ತಾಳೆ ಮರದಿಂದ ಜಾರಿ ಬಿದ್ದು ವ್ಯಕ್ತಿ ಮೃತ್ಯು
ಬಂಟ್ವಾಳ: ತಾಳೆ ಮರದಿಂದ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ಮೃತ ಪಟ್ಟ ಘಟನೆ ಶಂಭೂರು ಗ್ರಾಮದಲ್ಲಿ ನಡೆದಿದೆ.
ಶಂಭೂರು ಗ್ರಾಮದ ಕುಂದಾಯಗೋಳಿ ನಿವಾಸಿ ಲೊಕಯ್ಯ ಪೂಜಾರಿ ಮೃತರು.
ಇನ್ನು ಲೊಕಯ್ಯ ಪೂಜಾರಿ ಅವರು ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು, ತಾಳೆ ಮರದಿಂದ ಶೇಂದಿ ತೆಗೆಯುವ ಕೆಲಸ ಮಾಡಿಕೊಂಡಿದ್ದರು. ಮಾ.31 ರಂದು ಶಂಭೂರು ಗ್ರಾಮದ ಕೊಂಕನರ ಕೋಡಿ ಎಂಬಲ್ಲಿ ತಾಳೆ ಮರದಿಂದ ಶೇಂದಿ ತೆಗೆಯುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು, ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.