ಪುತ್ತೂರು: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಪೊಸ್ಕೋ ಪ್ರಕರಣ ಆರೋಪಿ, ವಿಟ್ಲದ ನಿವಾಸಿಯ ಬಂಧನ
ಪುತ್ತೂರು: ಪುತ್ತೂರು ಮಹಿಳಾ ಪೊಲೀಸ್ ರಿಂದ ಪೋಸ್ಕೋ ಪ್ರಕೆಣದಲ್ಲಿ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ವಿಟ್ಲದ ಕನ್ಯಾನ ಗ್ರಾಮದ ಬೈರಿಕಟ್ಟೆ ಆಂಗ್ರಿ ನಿವಾಸಿ ಮಹಮ್ಮದ್ ತೌಪೀರ್ ಬಂಧಿತ ಆರೋಪಿ. ಈತನನ್ನು ಬೆಂಗಳೂರಿನ ಅಥಿಬೇಲೆ ಎಂಬಲ್ಲಿ ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.



