February 4, 2026

ಚಿಕ್ಕಮಗಳೂರು: ಸ್ವಿಫ್ಟ್ ಕಾರು, ಸ್ಕೂಟಿ ಮುಖಾಮುಖಿ ಢಿಕ್ಕಿ: ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು

0
image_editor_output_image-902760586-1680131787813.jpg

ಚಿಕ್ಕಮಗಳೂರು: ಸ್ವಿಫ್ಟ್ ಕಾರು, ಸ್ಕೂಟಿ ಮುಖಾಮುಖಿ ಡಿಕ್ಕಿ ಆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.

ಮೃತರನ್ನ ಅಜೀಮ್ (23) ಹಾಗೂ ಬಿಲಾಲ್ (20) ಎಂದು ಗುರುತಿಸಲಾಗಿದೆ.

ಮೃತರಿಬ್ಬರು ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದು, ಕೆಲಸಕ್ಕಾಗಿ ಅಜ್ಜಂಪುರ ತಾಲೂಕಿನ ಹುಣಸಘಟ್ಟ ಗ್ರಾಮಕ್ಕೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

ಹುಣಸಘಟ್ಟಕ್ಕೆ ಹೋಗುವಾಗ ಮಾರ್ಗ ಮಧ್ಯೆ ಅಜ್ಜಂಪುರದ ಕಡೆಯಿಂದ ತರಿಕೆರೆಗೆ ಬರುತ್ತಿದ್ದ ಸ್ವಿಫ್ಟ್ ಕಾರು ಹಾಗೂ ಸ್ಕೂಟಿ ಮುಖಾಂತರ ಡಿಕ್ಕಿಯಾಗಿದೆ.

ಅಪಘಾತದ ತೀವ್ರತೆಯಿಂದಾಗಿ ಹದಿಹರೆಯದ ಇಬ್ಬರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

error: Content is protected !!