March 22, 2026

ಕಾಸರಗೋಡು: ನಾಪತ್ತೆಯಾಗಿದ್ದ ಶಿಕ್ಷಕನ ಮೃತದೇಹ ಖಾಸಗಿ ಆಸ್ಪತ್ರೆಯ ಬಾವಿಯಲ್ಲಿ ಪತ್ತೆ

0
image_editor_output_image1174975592-1679948171218.jpg

ಕಾಸರಗೋಡು: ನೀರ್ಚಾಲು ಮಾನ್ಯದಿಂದ ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಶಿಕ್ಷಕರೋರ್ವರ ಮೃತದೇಹ ಕಾಸರಗೋಡು ನಗರದ ಖಾಸಗಿ ಆಸ್ಪತ್ರೆ ಪರಿಸರದ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ.

ಮಾನ್ಯ ಜ್ಞಾನೋದಯ ಅನುದಾನಿತ ಶಾಲೆಯ ಶಿಕ್ಷಕ, ಮಟ್ಟನ್ನೂರಿನ ಟಿ.ವಿ. ಪ್ರದೀಪ್ ಕುಮಾರ್(51) ಮೃತ ಪಟ್ಟವರು.

ದುರ್ವಾಸನೆ ಉಂಟಾದ ಹಿನ್ನಲೆಯಲ್ಲಿ ಪರಿ ಸರವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಬಾವಿಯಲ್ಲಿ ಗಮನಿಸಿದಾಗ ಮೃತದೇಹ ಪತ್ತೆಯಾಗಿದೆ.

ಕೊನೆಗೆ ತನಿಖೆ ನಡೆಸಿದಾಗ ಅದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಶಿಕ್ಷಕ ಪ್ರದೀಪ್ ಕುಮಾರ್ ರವರ ಮೃತದೇಹ ಎಂದು ಗುರುತು ಪತ್ತೆ ಹಚ್ಚಲಾಯಿತು.

Leave a Reply

Your email address will not be published. Required fields are marked *

error: Content is protected !!