May 10, 2026

2 ವರ್ಷದ ಮಗಳನ್ನು ಕೊಂದು ಶವವನ್ನು ಬಟ್ಟೆಯಲ್ಲಿ ಸುತ್ತಿ ಕೆರೆಗೆ ಎಸೆದ ತಂದೆ

0
image_editor_output_image-1755498683-1679862327199.jpg

ರಾಜಸ್ಥಾನ: ತಂದೆಯೊಬ್ಬರು ಶನಿವಾರ ತನ್ನ ಎರಡು ವರ್ಷದ ಮಗಳ ಕತ್ತು ಸೀಳಿ, ನಂತರ ಶವವನ್ನು ಬಟ್ಟೆಯಲ್ಲಿ ಸುತ್ತಿ ಸಮೀಪದ ಕೆರೆಗೆ ಎಸೆದಿದ್ದಾರೆ. ಉದಯಪುರದ ಗೋಗುಂಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಭಾನುವಾರ ಮಗುವಿನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ತನ್ನ ಮಗುವಿನ ಸಾವಿನ ವಿಷಯ ತಿಳಿದ ಆರೋಪಿಯ ಪತ್ನಿ ಜೋರಾಗಿ ಕಿರುಚಿಕೊಂಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.

ಮಗುವಿನ ತಾಯಿ ಜೋರಾಗಿ ಅಳಲು ಶುರು ಮಾಡಿದ್ದರಿಂದ ನೆರೆಹೊರೆಯವರು ಮನೆಗೆ ಕೂಡಲೇ ಧಾವಿಸಿದ್ದರು. ಆದರೆ ಅಷ್ಟರಲ್ಲಿ ಮಗುವಿನ ತಂದೆ ಪರಾರಿಯಾಗಿದ್ದ.

ನೆರೆಹೊರೆಯವರು ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಘಟನೆ ಕುರಿತು ಪೊಲೀಸರು ತನಿಖೆಯನ್ನೂ ಆರಂಭಿಸಿದ್ದಾರೆ.

ಮಗುವಿನ ಮೃತದೇಹವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ.

ನಂತರ ಸಮೀಪದ ಅರಣ್ಯದಲ್ಲಿ ಆರೋಪಿಗಾಗಿ ಹುಡುಕಾಟ ನಡೆಸಿದ್ದು, ಆತನನ್ನು ಬಂಧಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!