June 26, 2026

ಸುಳ್ಯದ ಗುರುಂಪು ಬಳಿ ಬರೆ ಕುಸಿತ: ಮಣ್ಣಿನಡಿ ಸಿಲುಕಿರುವ ಮೂವರು ಕಾರ್ಮಿಕರು

0
image_editor_output_image-2100218251-1679734590226.jpg

ಸುಳ್ಯ: ಸುಳ್ಯದ ಗುರುಂಪು ಬಳಿ ಬರೆ ಜರಿದು ಬಿದ್ದು ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಗಾಂಧಿನಗರ-ಆಲೆಟ್ಟಿ ರಸ್ತೆಯಲ್ಲಿ ಕಾರ್ಮಿಕರು ಸೆಂಟರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಗುರುಂಪು ಬಳಿ ಬರೆ ಜರಿದು ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ, ಇದರಿಂದ ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ರಕ್ಷಣಾ ತಂಡವು ಸ್ಥಳಕ್ಕಾಗಮಿಸಿದ್ದು, ಕಾರ್ಮಿಕರ ರಕ್ಷಣೆ ಕಾರ್ಯಾಚರಣೆ ನಡೆಯುತ್ತಿದೆ. ಜೆಸಿಬಿ ಮುಖಾಂತರ ಮಣ್ಣು ತೆಗೆಯುವ ಕೆಲಸ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!