March 22, 2026

ಮಂಗಳಪದವು: ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಸಾರ್ವಜನಿಕ ಸಭೆ: ಬಿಜೆಪಿ ದರ ಏರಿಸಿ, ಬಡವರ ಹೊಟ್ಟೆಗೆ ಹೊಡೆದಿದೆ ಎಂದ ಮಹಮ್ಮದ್ ಬಡಗನ್ನೂರು

0
IMG-20230323-WA0031.jpg

ವಿಟ್ಲ: ಕಾಂಗ್ರೆಸ್ ಪಕ್ಷ ಬಡವರ, ಮಧ್ಯಮ ವರ್ಗದವರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತದೆ. ಬಿಜೆಪಿ ದರ ಏರಿಸಿ, ಬಡವರ ಹೊಟ್ಟೆಗೆ ಹೊಡೆದಿದೆ. ರಮಾನಾಥ ರೈ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ಸಮಾಜಕ್ಕಾಗಿ ತ್ಯಾಗ ಮಾಡಿ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡುವಂತೆ ಮಾಡುವ ಸಂತನೇ ಆಗಿದ್ದಾರೆ. ಅವರು ಈ ಬಾರಿ ಕೊನೆಯ ಚುನಾವಣೆ ಅನ್ನುತ್ತಿದ್ದಾರೆ. ಅವರು ಇನ್ನೂ ಸ್ಪರ್ಧಿಸಿ, ಮಂತ್ರಿಯಾಗಿ ಬರಬೇಕು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಹೇಳಿದರು.

ಅವರು ಮಂಗಳವಾರ ಮಂಗಳಪದವು ಜಂಕ್ಷನ್ ನಲ್ಲಿ ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ತಾನು ಆರಂಭಿಸಿದ ಯೋಜನೆಗಳನ್ನು ಬಿಜೆಪಿ ಮುಂದುವರಿಸದೇ ಅನ್ಯಾಯವೆಸಗಿದೆ. ತಾನು ಮತ್ತೆ ಆಯ್ಕೆಯಾದರೆ ಕಾಮಗಾರಿಗಳನ್ನು ಪೂರ್ತಿಗೊಳಿಸುವುದಲ್ಲದೆ ಕ್ಷೇತ್ರಕ್ಕೆ ಇನ್ನಷ್ಟು ಅನುದಾನ ತರುತ್ತೇನೆ ಎಂದು ತಿಳಿಸಿದರು.

ಬೋಳಂತೂರು, ವೀರಕಂಭ ಇತ್ಯಾದಿ ಗ್ರಾಮಗಳಲ್ಲಿ ಪ್ರಜಾದ್ವನಿ ಯಾತ್ರೆ ನಡೆಯಿತು.

ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಸಂಜೀವ ಪೂಜಾರಿ, ಪಿಯೂಸ್ ಎಲ್. ರೋಡ್ರಿಗಸ್, ಅಬ್ಬಾಸ್ ಆಲಿ, ಸುಭಾಶ್ಚಂದ್ರ ಶೆಟ್ಟಿ, ಬೇಬಿ ಕುಂದರ್, ಪದ್ಮಶೇಖರ ಜೈನ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಶೇಖರ ರೈ, ಹುಸೈನ್, ಕೃಷ್ಣಪ್ಪ ವೀರಕಂಬ, ವಿಶ್ವಜಿತ್ ಬೋಳಂತೂರು, ಉಮೇಶ್, ಆಲ್ಬರ್ಟ್ ಮೆನೇಜಸ್, ಉಮೇಶ್, ಮಹಮ್ಮದ್ ಸಂಬಾರತೋಟ, ವಾಸುಪೂಜಾರಿ, ಮೋಹನ್ ಶೆಟ್ಟಿ, ಲೋಲಾಕ್ಷ, ಶೀಲಾ ನಿರ್ಮಲಾ ವೇಗಸ್, ಅಬ್ದುಲ್ ರಹಿಮಾನ್, ಲಲಿತಾ, ಜನಾರ್ದನ ಪೂಜಾರಿ, ಗೀತಾಗಾಂಭೀರ, ನಿಶಾಂತ್ ರೈ, ರಾಮಚಂದ್ರ ಪ್ರಭು, ಶರೀಫ್ ಪರಕಾಜೆ, ಸಂದೀಪ್ ಪೂಜಾರಿ, ಇರ್ಷಾದ್ ಪಾತ್ರತೋಟ, ಸಿದ್ದೀಕ್ ಬೋಗೋಡಿ, ಸತೀಶ್ ಬಾಯಿಲ, ವಸಂತ ಪೂಜಾರಿ, ರಘು ಪೂಜಾರಿ, ದೇವದಾಸ ರೈ, ಪ್ರೇಮಲತಾ ಮತ್ತಿತರರು ಉಪಸ್ಥಿತರಿದ್ದರು.

ತಾ.ಪಂ. ಮಾಜಿ ಅಧ್ಯಕ್ಷ ಪದ್ಮನಾಭ ರೈ ಸ್ವಾಗತಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಅಭಿವೃದ್ಧಿ ಕಾರ್ಯದ ಮಾಹಿತಿಯನ್ನು ನೀಡಿದರು.

Leave a Reply

Your email address will not be published. Required fields are marked *

error: Content is protected !!